Genesis 10 - DBY (Kannada)
1 And these are the generations of the sons of Noah: Shem, Ham, and Japheth; and to them were sons born after the flood.ನೋಹನ ಕುಮಾರರಾದ ಶೇಮ್ ಹಾಮ್ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.
2 The sons of Japheth: Gomer, and Magog, and Madai, and Javan, and Tubal, and Meshech, and Tiras.ಯೆಫೆತನ ಕುಮಾರರು ಯಾರಂದರೆ, ಗೋಮೆರ್ ಮಾಗೋಗ್ ಮಾದಯ್ ಯಾವಾನ್ ತೂಬಲ್ ಮೇಷೆಕ್ ತೀರಾಸ್ ಎಂಬವರು.
3 And the sons of Gomer: Ashkenaz, and Riphath, and Togarmah.ಗೋಮೆರನ ಕುಮಾರರು ಯಾರಂದರೆ, ಅಷ್ಕೆನಸ್ ರೀಫತ್ ತೋಗರ್ಮ ಎಂಬವರು.
4 And the sons of Javan: Elishah, and Tarshish, Kittim, and Dodanim.ಯಾವಾನನ ಕುಮಾರರು ಯಾರಂದರೆ, ಎಲೀಷಾ ತಾರ್ಷೀಷ್ ಕಿತ್ತೀಮ್ ದೋದಾನಿಮ್ ಇವರೇ.
5 From these came the distribution of the isles of the nations, according to their lands, every one after his tongue, after their families, in their nations.ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.
6 And the sons of Ham: Cush, and Mizraim, and Phut, and Canaan.ಹಾಮನ ಕುಮಾರರು ಯಾರಂದರೆ, ಕೂಷ್ ಮಿಚ್ರಯಿಮ್ ಪೂತ್ ಕಾನಾನ್ ಎಂಬವರು.
7 And the sons of Cush: Seba, and Havilah, and Sabtah, and Raamah, and Sabtecha. And the sons of Raamah: Sheba and Dedan.ಕೂಷನ ಕುಮಾರರು ಯಾರಂದರೆ, ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು. ರಗ್ಮನ ಕುಮಾರರು ಯಾರಂದರೆ, ಶೆಬಾ ದೆದಾನ್ ಎಂಬವರು.
8 And Cush begot Nimrod: he began to be mighty on the earth.ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು.
9 He was a mighty hunter before Jehovah; therefore it is said, As Nimrod, the mighty hunter before Jehovah!ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು.
10 And the beginning of his kingdom was Babel, and Erech, and Accad, and Calneh, in the land of Shinar.ಶಿನಾರ್ ದೇಶದಲ್ಲಿರುವ ಬಾಬೆಲ್ ಯೆರೆಕ್ ಅಕ್ಕದ್ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.
11 From that land went out Asshur, and built Nineveh, and Rehoboth-Ir, and Calah,ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ಎಂಬ ಪಟ್ಟಣ, ಕೆಲಹ,
12 and Resen, between Nineveh and Calah: this is the great city.ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್‌ನನ್ನು ಕಟ್ಟಿದನು.
13 -- And Mizraim begot the Ludim, and the Anamim, and the Lehabim, and the Naphtuhim,ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
14 and the Pathrusim, and the Casluhim, out of whom came the Philistines, and the Caphtorim.ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು.
15 -- And Canaan begot Sidon, his firstborn, and Heth,ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ
16 and the Jebusite, and the Amorite, and the Girgashite,ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ
17 and the Hivite, and the Arkite, and the Sinite,ಹಿವ್ವಿಯನೂ ಅರ್ಕಿಯನೂ ಸೀನಿಯನೂ
18 and the Arvadite, and the Zemarite, and the Hamathite. And afterwards the families of the Canaanites spread themselves abroad.ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು.
19 And the border of the Canaanite was from Sidon, as one goes to Gerar, up to Gazah; as one goes to Sodom, and Gomorrah, and Admah, and Zeboim, up to Lesha.ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್ ಗೊಮೋರ ಅದ್ಮಾ ಚೆಬೋಯಿಮ್ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ.
20 These are the sons of Ham, after their families, after their tongues, in their lands, in their nations.ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು.
21 And to Shem -- to him also were [sons] born; he is the father of all the sons of Eber, the brother of Japheth the elder.ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
22 The sons of Shem: Elam, and Asshur, and Arphaxad, and Lud, and Aram.ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್.
23 And the sons of Aram: Uz, and Hul, and Gether, and Mash.ಅರಾಮನ ಮಕ್ಕಳು ಯಾರಂದರೆ, ಊಸ್ ಹೂಲ್ ಗೆತೆರ್ ಮಷ್ ಇವರೇ.
24 -- And Arphaxad begot Shelah; and Shelah begot Eber.ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು.
25 And to Eber were born two sons: the name of the one was Peleg, for in his days was the earth divided; and his brother's name was Joktan.ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್.
26 And Joktan begot Almodad, and Sheleph, and Hazarmaveth, and Jerah,ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ
27 and Hadoram, and Uzal, and Diklah,ಹದೋರಾಮನೂ ಊಜಾಲನೂ ದಿಕ್ಲಾನನೂ
28 and Obal, and Abimael, and Sheba,ಓಬಾಲನೂ ಅಬೀಮಯೇಲನೂ ಶೆಬನೂ
29 and Ophir, and Havilah, and Jobab: all these were sons of Joktan.ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು.
30 And their dwelling was from Mesha, as one goes to Sephar, the eastern mountain.ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು.
31 These are the sons of Shem, after their families, after their tongues, in their lands, after their nations.ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು.
32 These are the families of the sons of Noah, after their generations, in their nations. And from these came the distribution of the nations on the earth after the flood.ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
Kannada Bible