Exodus 39 - WBT (Kannada)
1 And of the blue, and purple, and scarlet, they made clothes of service, to do service in the holy place, and made the holy garments for Aaron; as the LORD commanded Moses.ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.
2 And he made the ephod of gold, blue, and purple, and scarlet, and fine twined linen.ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.
3 And they beat the gold into thin plates, and cut it into wires, to work it in the blue, and in the purple, and in the scarlet, and in the fine linen, with curious work.ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.
4 They made shoulder-pieces for it, to couple it together: by the two edges was it coupled together.(ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.
5 And the curious girdle of his ephod, that was upon it, was of the same, according to the work thereof; of gold, blue, and purple, and scarlet, and fine twined linen; as the LORD commanded Moses.ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.
6 And they wrought onyx stones inclosed in ouches of gold, graven as signets are graven, with the names of the children of Israel.ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.
7 And he put them on the shoulders of the ephod, that they should be stones for a memorial to the children of Israel; as the LORD commanded Moses.ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.
8 And he made the breast-plate of curious work, like the work of the ephod; of gold, blue, and purple, and scarlet, and fine twined linen.ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.
9 It was foursquare; they made the breast-plate double: a span was the length of it, and a span the breadth of it, being doubled.ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.
10 And they set in it four rows of stones: the first row was a sardius, a topaz, and a carbuncle: this was the first row.ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು.
11 And the second row, an emerald, a sapphire, and a diamond.ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.
12 And the third row, a ligure, an agate, and an amethyst.ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು.
13 And the fourth row, a beryl, an onyx, and a jasper: they were inclosed in ouches of gold in their inclosings.ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು.
14 And the stones were according to the names of the children of Israel, twelve, according to their names, like the engravings of a signet, every one with his name, according to the twelve tribes.ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.
15 And they made upon the breast-plate chains at the ends, of wreathed work of pure gold.ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.
16 And they made two ouches of gold, and two gold rings, and put the two rings in the two ends of the breast-plate.ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.
17 And they put the two wreathed chains of gold in the two rings on the ends of the breast-plate.ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.
18 And the two ends of the two wreathed chains they fastened in the two ouches, and put them on the shoulder-pieces of the ephod, before it.ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.
19 And they made two rings of gold, and put them on the two ends of the breast-plate, upon the border of it, which was on the side of the ephod inward.ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.
20 And they made two other golden rings, and put them on the two sides of the ephod underneath, towards the forepart of it, over against the other coupling thereof, above the curious girdle of the ephod:ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.
21 And they bound the breast-plate by its rings to the rings of the ephod with a lace of blue, that it might be above the curious girdle of the ephod, and that the breast-plate might not be loosed from the ephod; as the LORD commanded Moses.ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಆ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.
22 And he made the robe of the ephod of woven work, all of blue.ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.
23 And there was a hole in the midst of the robe, as the hole of an habergeon, with a band around the hole, that it should not rend.ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಆ ರಂಧ್ರದ ಸುತ್ತಲೂ ಗೋಟು ಇತ್ತು.
24 And they made upon the hems of the robe pomegranates of blue, and purple, and scarlet, and twined linen.ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.
25 And they made bells of pure gold, and put the bells between the pomegranates upon the hem of the robe, around between the pomegranates;ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಆ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.
26 A bell and a pomegranate, a bell and a pomegranate, around the hem of the robe to minister in; as the LORD commanded Moses.ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.
27 And they made coats of fine linen, of woven work, for Aaron and for his sons,ಆರೋನನಿಗೂ ಅವನ ಮಕ್ಕಳಿಗೂ ನಾರು ನೂಲಿನಿಂದ ಮಾಡಿದ ನೇಯ್ಗೆ ಕೆಲಸದ ಅಂಗಿಗಳನ್ನೂ
28 And a miter of fine linen, and goodly bonnets of fine linen, and linen breeches of fine twined linen,ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ
29 And a girdle of fine twined linen, and blue, and purple, and scarlet, of needle-work; as the LORD commanded Moses.ಹೊಸೆದ ನಯ ವಾದ ನಾರು ನೀಲಿ ಧೂಮ್ರ ರಕ್ತವರ್ಣದ ಹೆಣಿಗೆಯ ಕೆಲಸದ ಪ್ರಕಾರ ನಡುಕಟ್ಟನ್ನೂ ಮಾಡಿದರು. ಇವು ಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
30 And they made the plate of the holy crown of pure gold, and wrote upon it a writing, like to the engravings of a signet, HOLINESS TO THE LORD.ಪರಿಶುದ್ಧ ಕಿರೀಟವಾಗಿರುವ ತಗಡನ್ನು ಶುದ್ಧ ಬಂಗಾರದಿಂದ ಮಾಡಿ ಕರ್ತನಿಗೆ ಪರಿಶುದ್ಧ ಎಂದು ಮುದ್ರೆ ಕೆತ್ತುವವರ ಬರಹದಿಂದ ಅದರ ಮೇಲೆ ಬರೆದು
31 And they tied to it a lace of blue, to fasten it on high upon the miter; as the LORD commanded Moses.ಅದನ್ನು ಮುಂಡಾಸದ ಮೇಲೆ ಬಿಗಿಸುವದ ಕ್ಕೋಸ್ಕರ ನೀಲಿ ನೂಲಿನಿಂದ ಕಟ್ಟಿದರು. ಇದನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.
32 Thus was all the work of the tabernacle of the tent of the congregation finished: and the children of Israel did according to all that the LORD commanded Moses, so did they.ಈ ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ ಮಕ್ಕಳು ಅದರಂತೆಯೇ ಮಾಡಿದರು.
33 And they brought the tabernacle to Moses, the tent, and all its furniture, its buttons, its boards, its bars, and its pillars, and its sockets,ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;
34 And the covering of rams' skins dyed red, and the covering of badgers' skins, and the vail of the covering,ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು;
35 The ark of the testimony, and its staffs, and the mercy-seat,ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು;
36 The table, and all its vessels, and the show-bread,ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು;
37 The pure candlestick, with its lamps, even with the lamps to be set in order, and all its vessels, and the oil for light,ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;
38 And the golden altar, and the anointing oil, and the sweet incense, and the hanging for the tabernacle-door,ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು;
39 The brazen altar, and its grate of brass, its staffs, and all its vessels, the laver and its foot,ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು,
40 The hangings of the court, its pillars, and its sockets, and the hanging for the court-gate, its cords, and its pins, and all the vessels of the service of the tabernacle, for the tent of the congregation,ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;
41 The clothes of service to do service in the holy place, and the holy garments for Aaron the priest, and his sons' garments, to minister in the priest's office.ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.
42 According to all that the LORD commanded Moses, so the children of Israel made all the work.ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.
43 And Moses looked upon all the work, and behold, they had done it as the LORD had commanded, even so had they done it: and Moses blessed them.ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
Kannada Bible