Bible

Exodus 35 - WEB (Kannada)

1 Moses assembled all the congregation of the children of Israel, and said to them, "These are the words which Yahweh has commanded, that you should do them.ಮೋಶೆಯು ಇಸ್ರಾಯೇಲ್‌ ಮಕ್ಕಳ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ--ನೀವು ಮಾಡುವದಕ್ಕೆ ಕರ್ತನು ಆಜ್ಞಾಪಿಸಿದ ವಾಕ್ಯಗಳು ಇವೇ.

2 'Six days shall work be done, but on the seventh day there shall be a holy day for you, a Sabbath of solemn rest to Yahweh: whoever does any work in it shall be put to death.ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.

3 You shall kindle no fire throughout your habitations on the Sabbath day.'"ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್‌ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.

4 Moses spoke to all the congregation of the children of Israel, saying, "This is the thing which Yahweh commanded, saying,ಮೋಶೆಯು ಇಸ್ರಾಯೇಲ್‌ ಮಕ್ಕಳ ಸಭೆಗೆಲ್ಲಾ-- ಕರ್ತನು ಆಜ್ಞಾಪಿಸಿದ್ದು ಇದೇ. ಅದೇನಂದರೆ--

5 'Take from among you an offering to Yahweh. Whoever is of a willing heart, let him bring it, Yahweh's offering: gold, silver, brass,ಕರ್ತನಿಗೋಸ್ಕರ ನಿಮ್ಮೊಳಗಿಂದ ಕಾಣಿಕೆಗಳನ್ನು ತೆಗೆದು ಕೊಳ್ಳಿರಿ. ಮನಃಪೂರ್ವಕವಾಗಿ ಕರ್ತನಿಗೆ ತರಬೇಕಾದವುಗಳು; ಚಿನ್ನ, ಬೆಳ್ಳಿ, ಹಿತ್ತಾಳೆ

6 blue, purple, scarlet, fine linen, goats' hair,ನೀಲಿ, ಧೂಮ್ರ, ಕೆಂಪುವರ್ಣದ ನಯವಾದ ನಾರುಮಡಿ, ಮೇಕೆಯ ಕೂದಲು,

7 rams' skins dyed red, sea cow hides, acacia wood,ಕೆಂಪು ಬಣ್ಣದಲ್ಲಿ ಅದ್ದಿದ ಟಗರಿನ ಚರ್ಮಗಳು, ಕಡಲು ಹಂದಿಯ ಚರ್ಮಗಳು ಜಾಲೀಮರವು.

8 oil for the light, spices for the anointing oil and for the sweet incense,ದೀಪಕ್ಕೋಸ್ಕರ ಎಣ್ಣೆ, ಅಭಿಷೇಕಿಸುವ ತೈಲಕ್ಕೋಸ್ಕರ ಮತ್ತು ಪರಿಮಳ ಧೂಪಕ್ಕೋಸ್ಕರ ಸುಗಂಧತೈಲ,

9 onyx stones, and stones to be set for the ephod and for the breastplate.ಗೋಮೇಧಕ, ಎಫೋದ್‌ನ್ನು ಎದೆಯಲ್ಲಿಯೂ ಪದಕದಲ್ಲಿಯೂ ಕೂಡ್ರಿಸಲು ರತ್ನಗಳು ಇವೆ.

10 "Let every wise-hearted man among you come, and make all that Yahweh has commanded:ನಿಮ್ಮಲ್ಲಿ ಜ್ಞಾನದ ಹೃದಯವುಳ್ಳವರೆಲ್ಲರೂ ಬಂದು ಕರ್ತನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಲಿ.

11 the tent, its outer covering, its roof, its clasps, its boards, its bars, its pillars, and its sockets;ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ

12 the ark, and its poles, the mercy seat, the veil of the screen;ಮಂಜೂಷವನ್ನೂ ಅದರ ಕೋಲುಗಳನ್ನೂ ಅವುಗಳೊಂದಿಗೆ ಕರುಣಾಸನ ವನ್ನೂ ಮರೆಮಾಡುವ ತೆರೆಯನ್ನೂ

13 the table with its poles and all its vessels, and the show bread;ಮೇಜನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಸಮ್ಮುಖದ ರೊಟ್ಟಿಯನ್ನೂ

14 the lampstand also for the light, with its vessels, its lamps, and the oil for the light;ಬೆಳಕಿಗಾಗಿ ದೀಪಸ್ತಂಭವನ್ನೂ ಅದರ ಉಪಕರಣಗಳನ್ನೂ ಅದರ ದೀಪಗಳನ್ನೂ ಬೆಳಕಿಗಾಗಿ ಎಣ್ಣೆಯನ್ನೂ

15 and the altar of incense with its poles, the anointing oil, the sweet incense, the screen for the door, at the door of the tent;ಧೂಪ ವೇದಿಯನ್ನೂ ಅದರ ಕೋಲುಗಳನ್ನೂ ಅಭಿಷೇಕಿಸುವ ಎಣ್ಣೆಯನ್ನೂ ಪರಿಮಳ ಧೂಪವನ್ನೂ ಗುಡಾರದಲ್ಲಿ ಪ್ರವೇಶಿಸುವ ಬಾಗಲಿನ ತೆರೆಯನ್ನೂ

16 the altar of burnt offering, with its grating of brass, it poles, and all its vessels, the basin and its base;ಯಜ್ಞವೇದಿ ಯನ್ನೂ ಅದರೊಂದಿಗೆ ಹಿತ್ತಾಳೆಯ ಜಲ್ಲಡಿಯನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಗಂಗಾಳವನ್ನೂ ಅದರ ಪೀಠ

17 the hangings of the court, its pillars, their sockets, and the screen for the gate of the court;ಅಂಗಳದ ಪರದೆಗಳನ್ನೂ ಅದರ ಸ್ತಂಭಗಳನ್ನೂ ಅದರ ಕುಳಿಗ ಳನ್ನೂ ಅಂಗಳದ ಬಾಗಲಿನ ತೆರೆಗಳನ್ನೂ

18 the pins of the tent, the pins of the court, and their cords;ಗುಡಾರದ ಗೂಟಗಳನ್ನೂ ಅಂಗಳದ ಗೂಟಗಳನ್ನೂ ಅವುಗಳ ಹಗ್ಗಗಳನ್ನೂ

19 the finely worked garments, for ministering in the holy place, the holy garments for Aaron the priest, and the garments of his sons, to minister in the priest's office.'"ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದ ಕ್ಕಾಗಿ ಸೇವೆಯ ವಸ್ತ್ರಗಳನ್ನೂ ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನೂ ಯಾಜಕ ಸೇವೆಗೋಸ್ಕರ ಅವನ ಕುಮಾರರ ವಸ್ತ್ರಗಳನ್ನೂ ಮಾಡಲಿ ಅಂದನು.

20 All the congregation of the children of Israel departed from the presence of Moses.ಆಗ ಇಸ್ರಾಯೇಲ್‌ ಮಕ್ಕಳ ಸಭೆಯವರೆಲ್ಲರೂ ಮೋಶೆಯ ಎದುರಿನಿಂದ ಹೊರಟುಹೋದರು.

21 They came, everyone whose heart stirred him up, and everyone whom his spirit made willing, and brought Yahweh's offering, for the work of the tent of meeting, and for all of its service, and for the holy garments.ಅವರಲ್ಲಿ ಪ್ರತಿಯೊಬ್ಬನು ಹೃದಯ ಪ್ರೇರಣೆಯಿಂದ ಮತ್ತು ಪ್ರತಿಯೊಬ್ಬನು ತನ್ನ ಮನಸ್ಸು ಇಷ್ಟಪಡುವಂತೆ ಸಭೆಯ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.

22 They came, both men and women, as many as were willing-hearted, and brought brooches, ear-rings, signet-rings, and armlets, all jewels of gold; even every man who offered an offering of gold to Yahweh.ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮುರುವುಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಪ್ರತಿಯೊಬ್ಬನೂ ಚಿನ್ನದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಿದನು.

23 Everyone, with whom was found blue, purple, scarlet, fine linen, goats' hair, rams' skins dyed red, and sea cow hides, brought them.ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ, ಮೇಕೆಯ ಕೂದಲು; ಟಗರುಗಳ ಕೆಂಪು ಬಣ್ಣದ ಚರ್ಮಗಳು, ಕಡಲು ಹಂದಿಯ ಚರ್ಮಗಳು, ಯಾರ ಬಳಿಯಲ್ಲಿದ್ದವೋ ಅವರೆಲ್ಲರು ತಂದರು.

24 Everyone who did offer an offering of silver and brass brought Yahweh's offering; and everyone, with whom was found acacia wood for any work of the service, brought it.ಬೆಳ್ಳಿ ಹಿತ್ತಾಳೆಗಳ ಕಾಣಿಕೆ ಗಳನ್ನು ಅರ್ಪಿಸುವದಕ್ಕೆ ಮನಸ್ಸಿದ್ದವರೆಲ್ಲರೂ ಕರ್ತನಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸ ಕ್ಕೋಸ್ಕರ ಜಾಲೀ ಮರವಿದ್ದವರು ಅದನ್ನು ತಂದರು.

25 All the women who were wise-hearted spun with their hands, and brought that which they had spun, the blue, the purple, the scarlet, and the fine linen.ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.

26 All the women whose heart stirred them up in wisdom spun the goats' hair.ಜ್ಞಾನದಲ್ಲಿ ಹೃದಯ ಪ್ರೇರಣೆ ಹೊಂದಿದ ಸ್ತ್ರೀಯರೆಲ್ಲರೂ ಮೇಕೆ ಕೂದಲುಗಳನ್ನೂ ನೇಯ್ದರು.

27 The rulers brought the onyx stones, and the stones to be set, for the ephod and for the breastplate;ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ

28 and the spice, and the oil for the light, for the anointing oil, and for the sweet incense.ಸುಗಂಧದ್ರವ್ಯ ಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲ ಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆ ಯನ್ನೂ ತಂದರು.

29 The children of Israel brought a freewill offering to Yahweh; every man and woman, whose heart made them willing to bring for all the work, which Yahweh had commanded to be made by Moses.ಹೀಗೆ ಮಾಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ತರುವದಕ್ಕೆ ಹೃದಯ ಪ್ರೇರಿತರಾದ ಇಸ್ರಾಯೇಲಿನ ಎಲ್ಲಾ ಪುರುಷರೂ ಸ್ತ್ರೀಯರೂ ಕರ್ತ ನಿಗೆ ಮನಃಪೂರ್ವಕವಾದ ಕಾಣಿಕೆಯನ್ನು ತಂದರು.

30 Moses said to the children of Israel, "Behold, Yahweh has called by name Bezalel the son of Uri, the son of Hur, of the tribe of Judah.ಆಗ ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ--ನೋಡಿರಿ, ಕರ್ತನು ಯೂದ ಕುಲದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲ ನನ್ನು ಹೆಸರು ಹೇಳಿ ಕರೆದು

31 He has filled him with the Spirit of God, in wisdom, in understanding, in knowledge, and in all manner of workmanship;ಅವನನ್ನು ದೇವರಾತ್ಮ ನಿಂದ ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ವಿವೇಕ ದಲ್ಲಿಯೂ ಎಲ್ಲಾ ವಿಧವಾದ ಕೌಶಲ್ಯದಲ್ಲಿಯೂ

32 and to make skillful works, to work in gold, in silver, in brass,ಚಿನ್ನ ಬೆಳ್ಳಿ ಹಿತ್ತಾಳೆ ಇವುಗಳಿಂದ ವಿಚಿತ್ರವಾದ ಕಲ್ಪನೆಯ ಕೆಲಸವನ್ನು ಮಾಡುವದರಲ್ಲಿಯೂ

33 in cutting of stones for setting, and in carving of wood, to work in all kinds of skillful workmanship.ಕಲ್ಲುಗಳನ್ನು ಕೆತ್ತಿಡುವದರಲ್ಲಿಯೂ ಮರ ಕೆತ್ತನೆಯಲ್ಲಿಯೂ ಎಲ್ಲಾ ತರವಾದ ಕೌಶಲ್ಯದ ಕೆಲಸದಲ್ಲಿಯೂ ಜ್ಞಾನದಿಂದ ತುಂಬಿಸಿದ್ದಾನೆ.

34 He has put in his heart that he may teach, both he, and Oholiab, the son of Ahisamach, of the tribe of Dan.ಇದಲ್ಲದೆ ಅವನಿಗೂ ದಾನ ಕುಲದ ವನಾದ ಅಹೀಸಾಮಾಕನ ಮಗನಾದ ಒಹೋಲಿಯಾ ಬನಿಗೂ ಕಲಿಸುವ ಹೃದಯವನ್ನು ಕೊಟ್ಟಿದ್ದಾನೆ.

35 He has filled them with wisdom of heart, to work all manner of workmanship, of the engraver, of the skillful workman, and of the embroiderer, in blue, in purple, in scarlet, and in fine linen, and of the weaver, even of those who do any workmanship, and of those who make skillful works.ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.

Kannada Bible