Bible

Matthew 19 - WEB (Kannada)

1 It happened when Jesus had finished these words, he departed from Galilee, and came into the borders of Judea beyond the Jordan.ಯೇಸು ಆ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಗಲಿಲಾಯದಿಂದ ಹೊರಟು ಯೊರ್ದನಿನ ಆಚೆಯಿದ್ದ ತೀರಗಳಿಗೆ ಬಂದನು.

2 Great multitudes followed him, and he healed them there.ಜನರ ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿ ಸಿದವು; ಮತ್ತು ಆತನು ಅವರನ್ನು ಅಲ್ಲಿ ಸ್ವಸ್ಥ ಮಾಡಿದನು.

3 Pharisees came to him, testing him, and saying, "Is it lawful for a man to divorce his wife for any reason?"ಆಗ ಫರಿಸಾಯರು ಸಹ ಆತನನ್ನು ಶೋಧಿಸುವದ ಕ್ಕಾಗಿ ಆತನ ಬಳಿಗೆ ಬಂದು -- ಒಬ್ಬ ಮನುಷ್ಯನು ಯಾವ ಕಾರಣದಿಂದಲಾದರೂ ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ಅವನಿಗೆ ನ್ಯಾಯವೋ ಎಂದು ಕೇಳಿದರು.

4 He answered, "Haven't you read that he who made them from the beginning made them male and female,ಆತನು ಪ್ರತ್ಯುತ್ತರವಾಗಿ ಅವರಿಗೆ-- ಆದಿಯಲ್ಲಿ ಉಂಟುಮಾಡಿದಾತನು ಅವರನ್ನು ಗಂಡು ಹೆಣ್ಣಾಗಿ ಉಂಟುಮಾಡಿದನು.

5 and said, 'For this cause a man shall leave his father and mother, and shall join to his wife; and the two shall become one flesh?'ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಹೀಗೆ ಅವರಿಬ್ಬರೂ ಒಂದೇ ಶರೀರ ವಾಗಿರುವರು ಎಂದು ಹೇಳಿದ್ದನ್ನು ನೀವು ಓದ ಲಿಲ್ಲವೋ?

6 So that they are no more two, but one flesh. What therefore God has joined together, don't let man tear apart."ಆದದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿ ಸಿದ್ದನ್ನು ಮನುಷ್ಯನು ಅಗಲಿಸಬಾರದು ಎಂದು ಹೇಳಿ ದನು.

7 They asked him, "Why then did Moses command us to give her a bill of divorce, and divorce her?"ಅದಕ್ಕೆ ಅವರು ಆತನಿಗೆ--ಹೀಗಾದರೆ ತ್ಯಾಗ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಯಾಕೆ ಅಪ್ಪಣೆಕೊಟ್ಟನು ಎಂದು ಕೇಳಿದರು.

8 He said to them, "Moses, because of the hardness of your hearts, allowed you to divorce your wives, but from the beginning it has not been so.ಆತನು ಅವರಿಗೆ--ಮೋಶೆಯು ನಿಮ್ಮ ಹೃದಯದ ಕಾಠಿಣ್ಯತೆಯ ದೆಸೆಯಿಂದ ನಿಮ್ಮ ಹೆಂಡತಿ ಯರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ ಅಂದನು.

9 I tell you that whoever divorces his wife, except for sexual immorality, and marries another, commits adultery; and he who marries her when she is divorced commits adultery."ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣದಿಂ ದಲ್ಲದೆ ಯಾವನಾದರೂ ತನ್ನ ಹೆಂಡತಿಯನ್ನು ಬಿಟು ಮತ್ತೊಬ್ಬಳನ್ನು ಮದುವೆಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ.

10 His disciples said to him, "If this is the case of the man with his wife, it is not expedient to marry."ಆಗ ಆತನ ಶಿಷ್ಯರು ಆತನಿಗೆ-- ಒಬ್ಬ ಮನುಷ್ಯನ ಪರಿಸ್ಥಿತಿ ಯು ತನ್ನ ಹೆಂಡತಿಯೊಂದಿಗೆ ಹೀಗಿರುವದಾದರೆ ಮದು ವೆಯಾಗುವದು ಒಳ್ಳೇದಲ್ಲ ಅಂದಾಗ.

11 But he said to them, "Not all men can receive this saying, but those to whom it is given.ಆತನು ಅವರಿಗೆ--ಯಾರಿಗೆ ಇದು ಕೊಡಲ್ಪಟ್ಟಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಅಂಗೀಕರಿಸಲಾರರು.

12 For there are eunuchs who were born that way from their mother's womb, and there are eunuchs who were made eunuchs by men; and there are eunuchs who made themselves eunuchs for the Kingdom of Heaven's sake. He who is able to receive it, let him receive it."ಯಾಕಂದರೆ ತಮ್ಮ ತಾಯಿಯ ಗರ್ಭದಿಂದ ಹುಟ್ಟಿ ದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಮತ್ತು ಕೆಲವರು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟ ವರು ಇದ್ದಾರೆ, ಇನ್ನು ಕೆಲವರು ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗ ಮಾಡಿ ಕೊಂಡವರೂ ಇದ್ದಾರೆ; ಇದ

13 Then little children were brought to him, that he should lay his hands on them and pray; and the disciples rebuked them.ತರುವಾಯ ಆತನು ತನ್ನ ಕೈಗಳನ್ನಿಟ್ಟು ಪ್ರಾರ್ಥಿಸು ವಂತೆ ಕೆಲವರು ಚಿಕ್ಕಮಕ್ಕಳನ್ನು ಆತನ ಬಳಿಗೆ ತಂದರು. ಆಗ ಶಿಷ್ಯರು ಅವರನ್ನು ಗದರಿಸಿದರು.

14 But Jesus said, "Allow the little children, and don't forbid them to come to me; for to such belongs the Kingdom of Heaven."ಆದರೆ ಯೇಸು--ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರ ದಂತೆ ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ಪರಲೋಕರಾಜ್ಯವು ಇಂಥವರದೇ ಅಂದನು.

15 He laid his hands on them, and departed from there.ಮತ್ತು ಆತನು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಅಲ್ಲಿಂದ ಹೊರಟು ಹೋದನು.

16 Behold, one came to him and said, "Good teacher, what good thing shall I do, that I may have eternal life?"ಆಗ ಇಗೋ, ಒಬ್ಬನು ಬಂದು ಆತನಿಗೆ-- ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಹೊಂದುವದಕ್ಕೆ ಯಾವ ಒಳ್ಳೇ ಕಾರ್ಯವನ್ನು ಮಾಡ ಬೇಕು ಎಂದು ಕೇಳಿದನು.

17 He said to him, "Why do you call me good? No one is good but one, that is, God. But if you want to enter into life, keep the commandments."ಆಗ ಆತನು ಅವನಿಗೆ--ನನ್ನನ್ನು ಒಳ್ಳೆಯವನೆಂದು ನೀನು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ; ಆದರೆ ನೀನು ಜೀವದಲ್ಲಿ ಸೇರಬೇಕೆಂದು ಅಪೇ ಕ್ಷಿಸಿದರೆ(ದೇವರ)ಆಜ್ಞೆಗಳನ್ನು ಕೈಕೊಂಡು ನಡೆದುಕೋ ಅಂದನು.

18 He said to him, "Which ones?" Jesus said, "'You shall not murder.' 'You shall not commit adultery.' 'You shall not steal.' 'You shall not offer false testimony.'ಅವನು ಆತನಿಗೆ--ಅವು ಯಾವವು ಎಂದು ಕೇಳಿದನು. ಅದಕ್ಕೆ ಯೇಸು--ನೀನು ನರಹತ್ಯ ಮಾಡಬಾರದು, ನೀನು ವ್ಯಭಿಚಾರ ಮಾಡಬಾರದು, ನೀನು ಕದಿಯ ಬಾರದು, ನೀನು ಸುಳ್ಳುಸಾಕ್ಷಿ ಹೇಳ ಬಾರದು.

19 'Honor your father and mother.' And, 'You shall love your neighbor as yourself.'"ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಮಾಡ ಬೇಕು ಎಂದು ಹೇಳಿದನು.

20 The young man said to him, "All these things I have observed from my youth. What do I still lack?"ಆಗ ಆ ಯೌವನಸ್ಥನು ಆತನಿಗೆ--ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಕೈಕೊಂಡಿದ್ದೇನೆ; ಇನ್ನು ನನಗೇನು ಕಡಿಮೆಯಾಗಿದೆ ಎಂದು ಕೇಳಿದನು.

21 Jesus said to him, "If you want to be perfect, go, sell what you have, and give to the poor, and you will have treasure in heaven; and come, follow me."ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.

22 But when the young man heard the saying, he went away sad, for he was one who had great possessions.ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.

23 Jesus said to his disciples, "Most assuredly I say to you, a rich man will enter into the Kingdom of Heaven with difficulty.ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

24 Again I tell you, it is easier for a camel to go through a needle's eye, than for a rich man to enter into the Kingdom of God."ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು.

25 When the disciples heard it, they were exceedingly astonished, saying, "Who then can be saved?"ಇದನ್ನು ಕೇಳಿದಾಗ ಆತನ ಶಿಷ್ಯರು ಅತ್ಯಂತ ವಿಸ್ಮಯಗೊಂಡು-- ಹಾಗಾದರೆ ರಕ್ಷಿಸಲ್ಪಡುವವರು ಯಾರು ಎಂದು ಕೇಳಿದರು.

26 Looking at them, Jesus said, "With men this is impossible, but with God all things are possible."ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ--ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.

27 Then Peter answered, "Behold, we have left everything, and followed you. What then will we have?"ಆಮೇಲೆ ಪೇತ್ರನು ಆತನಿಗೆ--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಆದದ ರಿಂದ ನಮಗೆ ಏನು ದೊರೆಯುವದು ಎಂದು ಕೇಳಿದನು.

28 Jesus said to them, "Most assuredly I tell you that you who have followed me, in the regeneration when the Son of Man will sit on the throne of his glory, you also will sit on twelve thrones, judging the twelve tribes of Israel.ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ

29 Everyone who has left houses, or brothers, or sisters, or father, or mother, or wife, or children, or lands, for my name's sake, will receive one hundred times, and will inherit eternal life.ಮತ್ತು ತನ್ನ ಮನೆಗಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯನ್ನಾಗಲೀ ನನ್ನ ಹೆಸರಿ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನು

30 But many will be last who are first; and first who are last.ಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು.

Kannada Bible