1ಬಂಡೆಗಳ ಕಾಡು ಮೇಕೆಗಳು ಈಯುವ ಕಾಲವನ್ನು ನೀನು ತಿಳಿಯುತ್ತೀಯೋ? ದುಪ್ಪಿಗಳಿಗೆ ವೇದನೆ ಬರುವದನ್ನು ಪರಾಮರಿಸು ತ್ತೀಯೋ?Knowest thou the time when the wild goats of the rock bring forth? or canst thou mark when the hinds do calve?
2ಅವುಗಳ ಗರ್ಭ ತುಂಬುವ ತಿಂಗಳು ಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ತಿಳಿಯುತ್ತೀಯೋ?Canst thou number the months that they fulfil? or knowest thou the time when they bring forth?
3ಅವು ಬೊಗ್ಗಿಕೊಂಡು ಮರಿಗಳನ್ನು ಹಾಕುತ್ತವೆ. ವೇದನೆಗಳನ್ನು ಪರಿಹರಿಸಿಕೊಳ್ಳುತ್ತವೆ.They bow themselves, they bring forth their young ones, they cast out their sorrows.
4ಅವುಗಳ ಮರಿಗಳು ಚಂದವಾಗಿದ್ದು ಪೈರಿನಲ್ಲಿ ಬೆಳೆಯುತ್ತವೆ; ಅವು ಹೊರಟು ಹೋಗಿ ಅವುಗಳ ಬಳಿಗೆ ತಿರುಗಿ ಬರುವದಿಲ್ಲ.Their young ones are in good liking, they grow up with corn; they go forth, and return not unto them.
5ಕಾಡುಕತ್ತೆಯನ್ನು ಬಿಡುಗಡೆ ಮಾಡಿ ಕಳುಹಿಸಿದ ವನಾರು? ಕಾಡುಕತ್ತೆಯ ಸಂಕೋಲೆಗಳನ್ನು ಬಿಡಿಸಿದ ವನಾರು?Who hath sent out the wild ass free? or who hath loosed the bands of the wild ass?
6ಅರಣ್ಯವನ್ನು ಅದರ ಮನೆಯಾಗಿಯೂ ಉಪ್ಪಿನ ಬೈಲನ್ನು ಅದರ ವಾಸಸ್ಥಳವಾಗಿಯೂ ನೇಮಿಸಿ ದ್ದೇನಲ್ಲಾ.Whose house I have made the wilderness, and the barren land his dwellings.
7ಪಟ್ಟಣದ ಸಮೂಹಕ್ಕೆ ಗೇಲಿ ಮಾಡುತ್ತದೆ. ಓಡಿಸುವವನ ಕೂಗನ್ನು ಲಕ್ಷಿಸುವದಿಲ್ಲ.He scorneth the multitude of the city, neither regardeth he the crying of the driver.
8ಪರ್ವತ ಗಳಲ್ಲಿ ಕಂಡದ್ದೆಲ್ಲಾ ಅದರ ಮೇವು; ಹಸುರಾದದ್ದನ್ನೆಲ್ಲಾ ಹುಡುಕುತ್ತದೆ.The range of the mountains is his pasture, and he searcheth after every green thing.
9ಕಾಡು ಕೋಣವು ನಿನ್ನನ್ನು ಸೇವಿಸಲು ಮನಸ್ಸಾಗಿ ರುವದೋ? ಇಲ್ಲವೆ ನಿನ್ನ ಗೋದಲಿಯ ಬಳಿಯಲ್ಲಿ ಉಳುಕೊಳ್ಳುವದೋ?Will the unicorn be willing to serve thee, or abide by thy crib?
10ಕಾಡು ಕೋಣವನ್ನು ಹುರಿ ಯಿಂದ ಸಾಲಾಗಿ ಕಟ್ಟುವಿಯೋ? ಇಲ್ಲವೆ ಅದು ನಿನ್ನ ಹಿಂದೆ ಕಣಿವೆಗಳಿಗೆ ಹಲಿಗೆ ಹೊಡೆಯುವದೋ?Canst thou bind the unicorn with his band in the furrow? or will he harrow the valleys after thee?
11ಅದರ ಶಕ್ತಿ ಬಹಳವಾಗಿರುವದರಿಂದ ಅದರಲ್ಲಿ ಭರವಸ ಇಡುವಿಯೋ? ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸುವಿಯೋ?Wilt thou trust him, because his strength is great? or wilt thou leave thy labour to him?
12ಅದು ನಿನ್ನ ಬೀಜವನ್ನು ಮನೆಗೆ ತರುವದೆಂದೂ ನಿನ್ನ ಕಣದಲ್ಲಿ ಕೂಡಿಸುವದೆಂದೂ ಅದನ್ನು ನಂಬುವಿಯೋ?Wilt thou believe him, that he will bring home thy seed, and gather it into thy barn?
13ನೀನು ನವಿಲುಗಳಿಗೆ ಅಂದವಾದ ರೆಕ್ಕೆಗಳನ್ನು ಉಷ್ಟ್ರಪಕ್ಷಿಗೆ ಗರಿಗಳನ್ನೂ ರೆಕ್ಕೆಗಳನ್ನೂ ಕೊಟ್ಟಿರು ತ್ತೀಯೋ?Gavest thou the goodly wings unto the peacocks? or wings and feathers unto the ostrich?
14ಅದು ತನ್ನ ಮೊಟ್ಟೆಗಳನ್ನು ಭೂಮಿ ಯಲ್ಲಿ ಬಿಟ್ಟು ದೂಳಿನಲ್ಲಿ ಅವುಗಳನ್ನು ಬಿಸಿಮಾಡು ತ್ತದೆ.Which leaveth her eggs in the earth, and warmeth them in dust,
15ಕಾಲು ಅದನ್ನು ತುಳಿದೀತು, ಇಲ್ಲವೆ ಅಡವಿಯ ಮೃಗ ಅದನ್ನು ಜಜ್ಜೀತು ಎಂದು ಮರೆತು ಬಿಡುತ್ತದೆ.And forgetteth that the foot may crush them, or that the wild beast may break them.
16ತನ್ನ ಮರಿಗಳನ್ನು ತನ್ನವುಗಳಲ್ಲವೆಂದು ಕಠಿಣವಾಗಿ ನಡಿಸುತ್ತದೆ. ತನ್ನ ಕಷ್ಟವು ವ್ಯರ್ಥವೆಂಬ ಹೆದರಿಕೆಯೂ ಇಲ್ಲ.She is hardened against her young ones, as though they were not her's: her labour is in vain without fear;
17ದೇವರು ಅದಕ್ಕೆ ಜ್ಞಾನ ತಪ್ಪಿಸಿದ್ದಾನೆ. ಗ್ರಹಿಕೆಯನ್ನು ಅದಕ್ಕೆ ಕೊಡಲಿಲ್ಲ.Because God hath deprived her of wisdom, neither hath he imparted to her understanding.
18ಉನ್ನತಕ್ಕೆ ಓಡುವ ಸಮಯದಲ್ಲಿ ಕುದುರೆಯನ್ನೂ ರಾಹುತನನ್ನೂ ನೋಡಿ ನಗುತ್ತದೆ.What time she lifteth up herself on high, she scorneth the horse and his rider.
19ನೀನು ಕುದುರೆಗೆ ತ್ರಾಣವನ್ನು ಕೊಟ್ಟಿದ್ದೀಯೋ? ಅದರ ಕುತ್ತಿಗೆಗೆ ಗುಡುಗನ್ನು ಹೊದ್ದಿಸಿದಿಯೋ?Hast thou given the horse strength? hast thou clothed his neck with thunder?
20ಮಿಡಿತೆಯ ಹಾಗೆ ಅದನ್ನು ಭಯಪಡಿಸುತ್ತೀಯೋ? ಪ್ರತಾಪವು, ಅದರ ಮೂಗಿನ ಸೊರಳೆಯು ಭಯಂ ಕರವಾಗಿದೆ.Canst thou make him afraid as a grasshopper? the glory of his nostrils is terrible.
21ಅದು ತಗ್ಗಿನಲ್ಲಿ ಕೆರೆಯುತ್ತದೆ; ತನ್ನ ಶಕ್ತಿಯಲ್ಲಿ ಸಂತೋಷಿಸುತ್ತದೆ; ಯುದ್ಧಸನ್ನದ್ಧರ ಎದು ರಾಗಿ ಹೊರಡುತ್ತದೆ.He paweth in the valley, and rejoiceth in his strength: he goeth on to meet the armed men.
22ಭಯಕ್ಕೆ ಹಾಸ್ಯ ಮಾಡು ತ್ತದೆ, ಹೆದರುವದಿಲ್ಲ. ಇಲ್ಲವೆ ಕತ್ತಿಯಿಂದ ತಿರುಗು ವದಿಲ್ಲ.He mocketh at fear, and is not affrighted; neither turneth he back from the sword.
23ಅದರ ಮೇಲೆ ಬತ್ತಳಿಕೆಯೂ ಪ್ರಜ್ವಲಿ ಸುವ ಭಲ್ಲೆಯೂ ಭರ್ಜಿಯೂ ಥಳಥಳಿಸುತ್ತವೆ.The quiver rattleth against him, the glittering spear and the shield.
24ಅದು ಕೋಪದಿಂದಲೂ ಉಗ್ರತೆಯಿಂದಲೂ ನೆಲ ನುಂಗುತ್ತದೆ; ಇಲ್ಲವೆ ಅದು ತುತೂರಿಯ ಶಬ್ದಕ್ಕೆ --ಹಾ, ಹಾ, ಅನ್ನುತ್ತದೆ; ಅದು ನಂಬುವದಿಲ್ಲ.He swalloweth the ground with fierceness and rage: neither believeth he that it is the sound of the trumpet.
25ತುತೂರಿಗಳ ಮಧ್ಯದಲ್ಲಿ ದೂರದಿಂದ ಕಾಳಗವನ್ನೂ ಅಧಿಪತಿಗಳ ಅಬ್ಬರವನ್ನೂ ಯುದ್ಧದ ಧ್ವನಿಯನ್ನೂ ಮೂಸಿ ನೋಡುತ್ತದೆ.He saith among the trumpets, Ha, ha; and he smelleth the battle afar off, the thunder of the captains, and the shouting.
26ಹದ್ದು ನಿನ್ನ ಜ್ಞಾನದಿಂದ ಹಾರುತ್ತದೋ? ತನ್ನ ರೆಕ್ಕೆಗಳನ್ನು ದಕ್ಷಿಣ ಕಡೆಗೆ ಚಾಚುತ್ತದೋ?Doth the hawk fly by thy wisdom, and stretch her wings toward the south?
27ರಣ ಹದ್ದು ಎತ್ತರಕ್ಕೆ ಹೋಗುವದೂ ತನ್ನ ಗೂಡನ್ನು ಎತ್ತುವದೂ ನಿನ್ನ ಅಪ್ಪಣೆಯ ಪ್ರಕಾರವೋ?Doth the eagle mount up at thy command, and make her nest on high?
28ಅದು ಬಂಡೆಯಲ್ಲಿ ವಾಸಿಸುತ್ತದೆ; ಬಂಡೆಯ ಸಂದುಗಳ ಲ್ಲಿಯೂ ದುರ್ಗಗಳಲ್ಲಿಯೂ ಅದು ಉಳುಕೊಳ್ಳುತ್ತದೆ.She dwelleth and abideth on the rock, upon the crag of the rock, and the strong place.
29ಅಲ್ಲಿಂದ ಆಹಾರವನ್ನು ಹುಡುಕುತ್ತದೆ. ಅದರ ಕಣ್ಣುಗಳು ದೂರಕ್ಕೆ ನೋಡುತ್ತವೆ.From thence she seeketh the prey, and her eyes behold afar off.
30ಅದರ ಮರಿ ಗಳು ರಕ್ತವನ್ನು ಹೀರುತ್ತವೆ; ಹೆಣ ಇದ್ದಲ್ಲೇ ಅದು ಇರುವದು.Her young ones also suck up blood: and where the slain are, there is she.