Bible

Daniel 8 - WEB (Kannada)

1 In the third year of the reign of king Belshazzar a vision appeared to me, even to me, Daniel, after that which appeared to me at the first.ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿಯೂ ಇನ್ನೊಂದು ದರ್ಶನವು ದಾನಿಯೇಲನಾದ ನನಗೆ ಕಾಣಿಸಿತು.

2 I saw in the vision; now it was so, that when I saw, I was in Shushan the palace, which is in the province of Elam; and I saw in the vision, and I was by the river Ulai.ಈ ದರ್ಶನದಲ್ಲಿ ನಾನು ನೋಡಿದ್ದೇನಂದರೆ--ನಾನು ಏಲಾಮ್‌ ಸೀಮೆ ಯಲ್ಲಿರುವ ಶೂಷನ್‌ನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ಊಲಾ ನದಿಯ ದಡದ ಮೇಲೆ ನಿಂತಿ ರುವ ಹಾಗೆ ನನಗೆ ತೋರಿತು.

3 Then I lifted up my eyes, and saw, and, behold, there stood before the river a ram which had two horns: and the two horns were high; but one was higher than the other, and the higher came up last.ಆಗ ನಾನು ಕಣ್ಣೆತ್ತಿ ನೋಡಿದಾಗ ಇಗೋ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ಉದ್ದವಾಗಿತ್ತು. ಆ ದೊಡ್ಡ ಕೊಂಬು, ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.

4 I saw the ram pushing westward, and northward, and southward; and no animals could stand before him, neither was there any who could deliver out of his hand; but he did according to his will, and magnified himself.ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿರು ವದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವದಕ್ಕೂ ಸಾಧ್ಯವಾಗು ವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ ತನ್ನನ್ನು ಹೆಚ್ಚಿಸಿಕೊಂಡಿತು.

5 As I was considering, behold, a male goat came from the west over the surface of the whole earth, and didn't touch the ground: and the goat had a notable horn between his eyes.ನಾನು ಆಲೋಚಿ ಸಲಾಗಿ ಇಗೋ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದಂತೆ ಭೂಮಂಡಲವನ್ನೆಲ್ಲಾ ದಾಟಿ ಕೊಂಡು ಬಂತು. ಆ ಹೋತದ ಕಣ್ಣುಗಳ ಮಧ್ಯೆ ಗಮನಿಸತಕ್ಕ ಒಂದು ಕೊಂಬು ಇತ್ತು.

6 He came to the ram that had the two horns, which I saw standing before the river, and ran on him in the fury of his power.ನಾನು ನೋಡಿದ ನದಿಯ ಹತ್ತಿರವಿದ್ದ ಎರಡು ಕೊಂಬಿನ ಟಗರಿನ ಬಳಿಗೆ ಅದು ಬಂದು ಪರಾಕ್ರಮದಿಂದ ರೋಷಗೊಂಡು ಅದರ ಬಳಿಗೆ ಓಡಿತು.

7 I saw him come close to the ram, and he was moved with anger against him, and struck the ram, and broke his two horns; and there was no power in the ram to stand before him; but he cast him down to the ground, and trampled on him; and there was none who could deliver the ram out of his hand.ಅದು ಟಗರಿನ ಹತ್ತಿರ ಬರುವದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದರ ಮುಂದೆ ನಿಲ್ಲುವದಕ್ಕೆ ಟಗರಿಗೆ ಏನೂ ಶಕ್ತಿಯಿ ರಲಿಲ್ಲ, ಆದರೆ ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಅದರ ಕೈಯಿಂದ ಬಿಡಿಸುವವನು ಯಾರೂ ಇರಲಿಲ್ಲ.

8 The male goat magnified himself exceedingly: and when he was strong, the great horn was broken; and instead of it there came up four notable [horns] toward the four winds of the sky.ಆದದರಿಂದ ಆ ಹೋತವು ಬಹಳವಾಗಿ ಹೆಚ್ಚಿಕೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.

9 Out of one of them came forth a little horn, which grew exceeding great, toward the south, and toward the east, and toward the glorious [land].ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.

10 It grew great, even to the host of the sky; and some of the host and of the stars it cast down to the ground, and trampled on them.ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.

11 Yes, it magnified itself, even to the prince of the host; and it took away from him the continual [burnt offering], and the place of his sanctuary was cast down.ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;

12 The host was given over [to it] together with the continual [burnt offering] through disobedience; and it cast down truth to the ground, and it did [its pleasure] and prospered.ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.

13 Then I heard a holy one speaking; and another holy one said to that certain one who spoke, How long shall be the vision [concerning] the continual [burnt-offering], and the disobedience that makes desolate, to give both the sanctuary and the host to be trodden under foot?ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ

14 He said to me, To two thousand and three hundred evenings [and] mornings; then shall the sanctuary be cleansed.ಅವನು ನನಗೆ--ಎರಡು ಸಾವಿರದ ಮುನ್ನೂರು ದಿನಗಳ ವರೆಗೂ ನಡೆಯುವವು; ಅನಂತರ ಪರಿಶುದ್ಧ ಸ್ಥಳವು ಶುದ್ಧೀಕರಿಸಲ್ಪಡುವದು ಎಂದು ಹೇಳಿದನು.

15 It happened, when I, even I Daniel, had seen the vision, that I sought to understand it; and, behold, there stood before me as the appearance of a man.ನಾನು, ಹೌದು, ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ ಅದರ ಅರ್ಥವನ್ನು ಶೋಧಿಸಿ ದಾಗ, ಇಗೋ, ಮನುಷ್ಯನ ರೂಪದಂತೆ ಇದ್ದದ್ದು ನನ್ನ ಮುಂದೆ ನಿಂತಿತು;

16 I heard a man's voice between [the banks of] the Ulai, which called, and said, Gabriel, make this man to understand the vision.ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ--ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.

17 So he came near where I stood; and when he came, I was frightened, and fell on my face: but he said to me, Understand, son of man; for the vision belongs to the time of the end.ಅದರಂತೆ ಅವನು ನನ್ನ ಬಳಿಗೆ ಬಂದನು; ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿಬಿದ್ದೆನು; ಆದರೆ ಅವನು ನನಗೆ--ಓ ಮನುಷ್ಯ ಪುತ್ರನೇ, ಇದು ಮಂದಟ್ಟಾಗಿರಲಿ; ಅಂತ್ಯಕಾಲದಲ್ಲಿ ಈ ದರ್ಶನವು ನೆರವೇರುವದು ಅಂದನು.

18 Now as he was speaking with me, I fell into a deep sleep with my face toward the ground; but he touched me, and set me upright.ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.

19 He said, Behold, I will make you know what shall be in the latter time of the indignation; for it belongs to the appointed time of the end.ಅವನು ಹೇಳಿದ್ದೇನಂದರೆ--ಇಗೋ, ಕ್ರೋಧದ ಕಟ್ಟಕಡೆಯಲ್ಲಿ ಆಗುವದನ್ನು ನಿನಗೆ ತಿಳಿಸು ತ್ತೇನೆ. ನಿಯಮಿತ ಕಾಲದಲ್ಲಿ ಅದು ಅಂತ್ಯವಾಗುವದು.

20 The ram which you saw, that had the two horns, they are the kings of Media and Persia.ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು ಏನಂದರೆ ಮೇದ್ಯಯದ ಮತ್ತು ಪಾರಸಿಯರ ಅರಸರು ಗಳು.

21 The rough male goat is the king of Greece: and the great horn that is between his eyes is the first king.ಆ ಒರಟು ಹೋತವು ಗ್ರೀಕ್‌ನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.

22 As for that which was broken, in the place where four stood up, four kingdoms shall stand up out of the nation, but not with his power.ಈಗ ಅದು ಮುರಿಯ ಲ್ಪಟ್ಟು, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ--ಆ ಜನಾಂಗದಿಂದ ನಾಲ್ಕು ರಾಜ್ಯ ಗಳು ಉದಯಿಸುವವು; ಆದರೆ ಅವನ (ಮೊದಲ ನೆಯ ಅರಸನ) ಅಧಿಕಾರದಲ್ಲಿ ಇರುವದಿಲ್ಲ;

23 In the latter time of their kingdom, when the transgressors are come to the full, a king of fierce face, and understanding dark sentences, shall stand up.ಅವರ ರಾಜ್ಯದ ಕಡೆಯ ಕಾಲದಲ್ಲಿ, ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.

24 His power shall be mighty, but not by his own power; and he shall destroy wonderfully, and shall prosper and do [his pleasure]; and he shall destroy the mighty ones and the holy people.ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು.

25 Through his policy he shall cause craft to prosper in his hand; and he shall magnify himself in his heart, and in [their] security shall he destroy many: he shall also stand up against the prince of princes; but he shall be broken without hand.ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.

26 The vision of the evenings and mornings which has been told is true: but seal up the vision; for it belongs to many days [to come].ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.

27 I, Daniel, fainted, and was sick certain days; then I rose up, and did the king's business: and I wondered at the vision, but none understood it.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.

Kannada Bible