Daniel 3 - ASV (Kannada)
1 Nebuchadnezzar the king made an image of gold, whose height was threescore cubits, and the breadth thereof six cubits: he set it up in the plain of Dura, in the province of Babylon.ಅರಸನಾದ ನೆಬೂಕದ್ನೆಚ್ಚರನು ಅರವತ್ತು ಮೊಳ ಎತ್ತರವಾಗಿಯೂ ಆರು ಮೊಳ ಅಗಲವಾಗಿಯೂ ಇರುವ ಒಂದು ಬಂಗಾರದ ಪ್ರತಿ ಮೆಯನ್ನು ಮಾಡಿಸಿ, ಬಾಬೆಲ್ ಪ್ರಾಂತ್ಯದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
2 Then Nebuchadnezzar the king sent to gather together the satraps, the deputies, and the governors, the judges, the treasurers, the counsellors, the sheriffs, and all the rulers of the provinces, to come to the dedication of the image which Nebuchadnezzar the king had set up.ಆ ಮೇಲೆ ಅರಸನಾದ ನೆಬೂಕದ್ನೆಚ್ಚರನು ಪ್ರಭುಗಳನ್ನೂ ರಾಜ್ಯ ಪಾಲರನ್ನೂ ಆಲೋಚನಾಕರ್ತರು ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಬೊಕ್ಕಸದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿ ಷ್ಠೆಗೆ ಕರೆಯಿಸಿದನು.
3 Then the satraps, the deputies, and the governors, the judges, the treasurers, the counsellors, the sheriffs, and all the rulers of the provinces, were gathered together unto the dedication of the image that Nebuchadnezzar the king had set up; and they stood before the image that Nebuchadnezzar had set up.ಆಗ ಪ್ರಧಾನರು (ಆಲೋಚ ನಾಗಾರರು) ರಾಜ್ಯಪಾಲರು ಅಧಿಕಾರಸ್ಥರು, ನ್ಯಾಯಾ ಧಿಪತಿಗಳು, ಬೊಕ್ಕಸದವರು ಸಲಹೆಗಾರರು, ಪಂಡಿ ತರು, ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೆಗಾಗಿ ಕೂಡಿ ಬಂದು ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ಬಂದು ನಿಂತರು.
4 Then the herald cried aloud, To you it is commanded, O peoples, nations, and languages,ಆಗ ಸಾರುವವನು ಗಟ್ಟಿ ಯಾಗಿ ಕೂಗಿ--ಓ ಪ್ರಜೆಗಳೇ, ಜನಾಂಗಗಳೇ ಮತ್ತು ನಾನಾ ಭಾಷೆಯವರೇ, ನಿಮಗೆ ಆಜ್ಞಾಪಿಸುವದೇ ನಂದರೆ--
5 that at what time ye hear the sound of the cornet, flute, harp, sackbut, psaltery, dulcimer, and all kinds of music, ye fall down and worship the golden image that Nebuchadnezzar the king hath set up;ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.
6 and whoso falleth not down and worshippeth shall the same hour be cast into the midst of a burning fiery furnace.ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು.
7 Therefore at that time, when all the peoples heard the sound of the cornet, flute, harp, sackbut, psaltery, and all kinds of music, all the peoples, the nations, and the languages, fell down and worshipped the golden image that Nebuchadnezzar the king had set up.ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
8 Wherefore at that time certain Chaldeans came near, and brought accusation against the Jews.ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು
9 They answered and said to Nebuchadnezzar the king, O king, live for ever.ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
10 Thou, O king, hast made a decree, that every man that shall hear the sound of the cornet, flute, harp, sackbut, psaltery, and dulcimer, and all kinds of music, shall fall down and worship the golden image;ಓ ಅರಸನೇ, ನೀನು ಪ್ರತಿಯೊಬ್ಬ ಮನುಷ್ಯನು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ
11 and whoso falleth not down and worshippeth, shall be cast into the midst of a burning fiery furnace.ಅಡ್ಡಬೀಳದೆಯೂ ಆರಾಧಿಸದೆಯೂ ಇರುವವ ನನ್ನು ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡಬೇಕೆಂದೂ ಆಜ್ಞೆಕೊಟ್ಟಿರುವೆಯಲ್ಲಾ!
12 There are certain Jews whom thou hast appointed over the affairs of the province of Babylon: Shadrach, Meshach, and Abed-nego; these men, O king, have not regarded thee: they serve not thy gods, nor worship the golden image which thou hast set up.ಈಗ ನೀನು ಬಾಬೆಲ್ ಪ್ರಾಂತ್ಯದ ಕೆಲಸಗಳ ಮೇಲೆ ಇಟ್ಟಿರುವ ಕೆಲವರು ಯೆಹೂದ್ಯರು ಇದ್ದಾರೆ, ಅಂದರೆ ಶದ್ರಕ್ ಮೇಷಕ್ ಅಬೇದ್‌ನೆಗೋ. ಓ ಅರಸನೇ, ಈ ಮನು ಷ್ಯರು ನಿನ್ನನ್ನು ಲಕ್ಷಿಸುವದಿಲ್ಲ. ಅವರು ನಿನ್ನ ದೇವರು ಗಳನ್ನೂ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯ ನ್ನಾದರೂ ಸೇವಿಸಲಿಲ್ಲ ಎಂದು ಹೇಳಿದರು.
13 Then Nebuchadnezzar in `his' rage and fury commanded to bring Shadrach, Meshach, and Abed-nego. Then they brought these men before the king.ಆಗ ನೆಬೂಕದ್ನೆಚ್ಚರನು ಕೋಪವುಳ್ಳವನಾಗಿಯೂ ರೌದ್ರ ವುಳ್ಳವನಾಗಿಯೂ ಶದ್ರಕ್ ಮೇಷಕ್ ಅಬೇದ್ ನೆಗೋರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆ ತಂದರು.
14 Nebuchadnezzar answered and said unto them, Is it of purpose, O Shadrach, Meshach, and Abed-nego, that ye serve not my god, nor worship the golden image which I have set up?ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ--ಶದ್ರಕ್ ಮೇಷಕ್ ಅಬೇದೆನೆಗೋ ಎಂಬ ವರೇ ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾ ಧಿಸದೆ ಇರಬೇಕೆಂದಿರುವಿರೋ?
15 Now if ye be ready that at what time ye hear the sound of the cornet, flute, harp, sackbut, psaltery, and dulcimer, and all kinds of music, ye fall down and worship the image which I have made, `well': but if ye worship not, ye shall be cast the same hour into the midst of a burning fiery furnace; and who is that god that shall deliver you out of my hands?ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.
16 Shadrach, Meshach, and Abed-nego answered and said to the king, O Nebuchadnezzar, we have no need to answer thee in this matter.ಆಗ ಶದ್ರಕ್ ಮೇಷಕ್ ಅಬೇದ್ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ--ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ.
17 If it be `so', our God whom we serve is able to deliver us from the burning fiery furnace; and he will deliver us out of thy hand, O king.ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು.
18 But if not, be it known unto thee, O king, that we will not serve thy gods, nor worship the golden image which thou hast set up.ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.
19 Then was Nebuchadnezzar full of fury, and the form of his visage was changed against Shadrach, Meshach, and Abed-nego: `therefore' he spake, and commanded that they should heat the furnace seven times more than it was wont to be heated.ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್‌ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು.
20 And he commanded certain mighty men that were in his army to bind Shadrach, Meshach, and Abed-nego, `and' to cast them into the burning fiery furnace.ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.
21 Then these men were bound in their hosen, their tunics, and their mantles, and their `other' garments, and were cast into the midst of the burning fiery furnace.ಅವರು ತಮ್ಮ ಶಲ್ಯ, ಇಜಾರು, ಮುಂಡಾಸ ಮೊದಲಾದವುಗಳನ್ನು ಧರಿಸಿಕೊಂಡವರಾಗಿರುವಾಗ ಅವರು ಧಗಧಗನೆ ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಲ್ಪಟ್ಟರು.
22 Therefore because the king's commandment was urgent, and the furnace exceeding hot, the flame of the fire slew those men that took up Shadrach, Meshach, and Abed-nego.ಅರಸನ ಆಜ್ಞೆಯು ತೀಕ್ಷ್ಣವಾಗಿಯೂ ಆವಿಗೆಯು ಧಗಧಗನೆ ಉರಿದದ್ದರಿಂದಲೂ ಬೆಂಕಿಯ ಜ್ವಾಲೆಯು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು.
23 And these three men, Shadrach, Meshach, and Abed-nego, fell down bound into the midst of the burning fiery furnace.ಶದ್ರಕ್ ಮೇಷಕ್ ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವ ರಾಗಿ ಧಗಧಗನೆ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಬಿದ್ದರು.
24 Then Nebuchadnezzar the king was astonished, and rose up in haste: he spake and said unto his counsellors, Did not we cast three men bound into the midst of the fire? They answered and said unto the king, True, O king.ಆಗ ಅರಸನಾದ ನೆಬೂಕದ್ನೆ ಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು ತನ್ನ ಆಲೋಚನಾಗಾರರ ಸಂಗಡ ಮಾತನಾಡಿ--ನಾವು ಮೂವರು ಮನುಷ್ಯರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿದೆ ವಲ್ಲವೇ? ಅಂದನು. ಆಗ ಅವರು ಅರಸನಿಗೆ--ಓ ಅರಸನೇ, ಹೌದು, ಸತ್ಯ ಎಂದು ಉತ್ತರಿಸಿದರು.
25 He answered and said, Lo, I see four men loose, walking in the midst of the fire, and they have no hurt; and the aspect of the fourth is like a son of the gods.ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ--ಇಗೋ, ಕಟ್ಟಲ್ಪಡದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿ ರುವದನ್ನು ನೋಡುತ್ತೇನೆ; ಅವರಿಗೆ ಯಾವ ಹಾನಿಯೂ ಇಲ್ಲ; ಅಲ್ಲದೆ ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು.
26 Then Nebuchadnezzar came near to the mouth of the burning fiery furnace: he spake and said, Shadrach, Meshach, and Abed-nego, ye servants of the Most High God, come forth, and come hither. Then Shadrach, Meshach, and Abed-nego came forth out of the midst of the fire.ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ--ಓ ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
27 And the satraps, the deputies, and the governors, and the king's counsellors, being gathered together, saw these men, that the fire had no power upon their bodies, nor was the hair of their head singed, neither were their hosen changed, nor had the smell of fire passed on them.ಆಗ ಪ್ರಧಾನರು ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು ಎಲ್ಲರೂ ಒಟ್ಟುಗೂಡಿ ಇವರ ಶರೀರದ ಮೇಲೆ ಬೆಂಕಿಯ ಅಧಿಕಾರವು ಇಲ್ಲದಿ ರುವದನ್ನೂ ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಡದಿರುವದನ್ನೂ ಅವರ ಅಂಗಿಗಳು ಬದಲಾಗದಿರು ವದನ್ನೂ ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವ ಆ ಮನುಷ್ಯರನ್ನು ಕಂಡರು.
28 Nebuchadnezzar spake and said, Blessed be the God of Shadrach, Meshach, and Abed-nego, who hath sent his angel, and delivered his servants that trusted in him, and have changed the king's word, and have yielded their bodies, that they might not serve nor worship any god, except their own God.ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ--ಶದ್ರಕ್ ಮೇಷಕ್ ಅಬೇದ್‌ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ.
29 Therefore I make a decree, that every people, nation, and language, which speak anything amiss against the God of Shadrach, Meshach, and Abed-nego, shall be cut in pieces, and their houses shall be made a dunghill; because there is no other god that is able to deliver after this sort.ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.
30 Then the king promoted Shadrach, Meshach, and Abed-nego in the province of Babylon.ಆಗ ಅರಸನು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
Kannada Bible