Bible

Acts 17 - WEB (Kannada)

1 Now when they had passed through Amphipolis and Apollonia, they came to Thessalonica, where there was a synagogue of the Jews.ಮುಂದೆ ಅವರು ಅಂಫಿಪೊಲಿ ಅಪೊ ಲೊನ್ಯಗಳನ್ನು ದಾಟಿ ಥೆಸಲೊನೀಕಕ್ಕೆ ಬಂದರು; ಅಲ್ಲಿ ಯೆಹೂದ್ಯರದೊಂದು ಸಭಾಮಂದಿರ ವಿತ್ತು.

2 Paul, as was his custom, went in to them, and for three Sabbath days reasoned with them from the Scriptures,ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್‌ ದಿನಗಳಲ್ಲಿ ಬರಹಗಳಿಂದ ಅವರ ಸಂಗಡ ವಾದಿಸಿ

3 explaining and demonstrating that the Christ had to suffer and rise again from the dead, and saying, "This Jesus, whom I proclaim to you, is the Christ."ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.

4 Some of them were persuaded, and joined Paul and Silas, of the devout Greeks a great multitude, and not a few of the chief women.ಆಗ ಅವರಲ್ಲಿ ಕೆಲವರೂ ಭಕ್ತ ರಾಗಿದ್ದ ಗ್ರೀಕರ ದೊಡ್ಡದೊಂದು ಸಮೂಹವೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ನಂಬಿ ಪೌಲ ಸೀಲರನ್ನು ಸೇರಿಸಿಕೊಂಡರು.

5 But the unpersuaded Jews took along{TR reads "And the Jews who were unpersuaded, becoming envious and taking along" instead of "But the unpersuaded Jews took along"} some wicked men from the marketplace, and gathering a crowd, set the city in an uproar. Assaulting the house of Jason, they sought to bring them out to the people.ನಂಬದಿರುವ ಯೆಹೂ ದ್ಯರು ಹೊಟ್ಟೇಕಿಚ್ಚುಪಟ್ಟು ನೀಚರಾದ ಕೆಲವು ದುಷ್ಟ ರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿಕೊಂಡು ಪಟ್ಟಣದಲ್ಲೆಲ್ಲಾ ಗದ್ದಲವನ್ನೆಬ್ಬಿಸಿ ಪೌಲ ಸೀಲರನ್ನು ಜನರೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.

6 When they didn't find them, they dragged Jason and certain brothers{The word for "brothers" here and where the context allows may be also correctly translated "brothers and sisters" or "siblings."} before the rulers of the city, crying, "These who have turned the world upside down have come here also,ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ;

7 whom Jason has received. These all act contrary to the decrees of Caesar, saying that there is another king, Jesus!"ಯಾಸೋನನು ಅವರನ್ನು ಸೇರಿಸಿ ಕೊಂಡಿದ್ದಾನೆ; ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಕೈಸರನ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು.

8 The multitude and the rulers of the city were troubled when they heard these things.ಜನರೂ ಪಟ್ಟಣದ ಅಧಿಕಾರಿಗಳೂ ಈ ಮಾತು ಗಳನ್ನು ಕೇಳಿ ಕಳವಳಪಟ್ಟು

9 When they had taken security from Jason and the rest, they let them go.ಯಾಸೋನ ಮೊದಲಾ ದವರಿಂದ ಹೊಣೆ ತೆಗೆದುಕೊಂಡು ಅವರನ್ನು ಬಿಟ್ಟುಬಿಟ್ಟರು.

10 The brothers immediately sent Paul and Silas away by night to Beroea. When they arrived, they went into the Jewish synagogue.ಕೂಡಲೆ ಸಹೊದರರು ರಾತ್ರಿಯಲ್ಲಿ ಪೌಲಸೀಲ ರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು; ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು.

11 Now these were more noble than those in Thessalonica, in that they received the word with all readiness of the mind, examining the Scriptures daily to see whether these things were so.ಅಲ್ಲಿಯವರು ಥೆಸಲೊನೀಕದವರಿಗಿಂತ ಸದ್ಗುಣ ವುಳ್ಳವರಾಗಿದ್ದು ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀ ಕರಿಸಿ ಇವರು ಹೇಳುವ ಮಾತುಗಳು ಹೌದೋ ಏನೋ ಎಂದು ಪ್ರತಿದಿನವೂ ಬರಹಗಳನ್ನು ಶೋಧಿ ಸುತ್ತಿದ್ದರು.

12 Many of them therefore believed; also of the prominent Greek women, and not a few men.ಆದದರಿಂದ ಅವರಲ್ಲಿ ಬಹಳ ಮಂದಿ ನಂಬಿದರು; ಇದಲ್ಲದೆ ಕುಲೀನರಾದ ಗ್ರೀಕ್‌ ಹೆಂಗಸರ ಲ್ಲಿಯೂ ಗಂಡಸರಲ್ಲಿಯೂ ಅನೇಕರು ನಂಬಿದರು.

13 But when the Jews of Thessalonica had knowledge that the word of God was proclaimed by Paul at Beroea also, they came there likewise, agitating the multitudes.ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಸಾರುತ್ತಾನೆಂದು ಥೆಸಲೊನೀಕದ ಯೆಹೂ ದ್ಯರಿಗೆ ತಿಳಿದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ರೇಗಿಸಿದರು.

14 Then the brothers immediately sent out Paul to go as far as to the sea, and Silas and Timothy still stayed there.ಕೂಡಲೆ ಸಹೋದರರು ಪೌಲನನ್ನು ಸಮುದ್ರದ ತನಕ ಸಾಗ ಕಳುಹಿಸಿದರು. ಆದರೆ ಸೀಲನೂ ತಿಮೊಥೆಯನೂ ಅಲ್ಲೇ ನಿಂತರು.

15 But those who escorted Paul brought him as far as Athens. Receiving a commandment to Silas and Timothy that they should come to him very quickly, they departed.ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋಗಿ ಸೀಲ ನನ್ನೂ ತಿಮೊಥೆಯನನ್ನೂ ಬೇಗ ತನ್ನ ಬಳಿಗೆ ಬರ ಬೇಕೆಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಹೋದರು.

16 Now while Paul waited for them at Athens, his spirit was provoked within him as he saw the city full of idols.ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣವೆಲ್ಲಾ ವಿಗ್ರಹಾರಾ ಧನೆಯಿಂದ ತುಂಬಿರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು.

17 So he reasoned in the synagogue with the Jews and the devout persons, and in the marketplace every day with those who met him.ಆದದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಸಂಗಡಲೂ ಭಕ್ತಿವಂತರ ಸಂಗಡಲೂ ಪ್ರತಿದಿನ ಪೇಟೆಯಲ್ಲಿ ತನ್ನನ್ನು ಸಂಧಿಸಿದವರ ಸಂಗಡಲೂ ವಾದಿಸಿದನು.

18 Some of the Epicurean and Stoic philosophers also{TR omits "also"} were conversing with him. Some said, "What does this babbler want to say?" Others said, "He seems to be advocating foreign deities," because he preached Jesus and the resurrection.ಇದಲ್ಲದೆ ಎಪಿಕೂರಿಯರು, ಸ್ತೋಯಿಕರು ಎಂಬ ತತ್ವ ವಿಚಾರಕರಲ್ಲಿ ಕೆಲವರು ಅವನನ್ನು ಎದುರಿಸಿದರು. ಮತ್ತು ಅವರಲ್ಲಿ ಕೆಲವರು--ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ ಅಂದರು. ಅವನು ಯೇಸುವಿನ ವಿಷಯವಾಗಿಯೂ ಪುನರುತ್ಥಾನದ ವಿಷಯ ವಾಗಿಯೂ ಸಾರುತ್ತಿದ್ದದರಿಂದ--ಇವನು ಅನ್ಯ ದೇವರ

19 They took hold of him, and brought him to the Areopagus, saying, "May we know what this new teaching is, which is spoken by you?ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡುಹೋಗಿ--ನೀನು ಹೇಳುವ ಈ ನೂತನವಾದ ಬೋಧನೆಯನ್ನು ನಾವು ತಿಳಿಯಬಹುದೋ?

20 For you bring certain strange things to our ears. We want to know therefore what these things mean."ಅಪೂರ್ವವಾದ ಕೆಲವು ಸಂಗತಿಗಳನ್ನು ನಮಗೆ ಶ್ರುತಪಡಿಸುತ್ತೀಯಲ್ಲಾ. ಆದಕಾರಣ ಅದರ ಅರ್ಥ ವನ್ನು ತಿಳಿಯುವದಕ್ಕೆ ನಮಗೆ ಅಪೇಕ್ಷೆಯದೆ ಅಂದರು.

21 Now all the Athenians and the strangers living there spent their time in nothing else, but either to tell or to hear some new thing.(ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳ ದವರೂ ಹೊಸ ವಿಷಯಗಳನ್ನು ಹೇಳುವದಕ್ಕೂ ಕೇಳುವದಕ್ಕೂ ಹೊರತು ಬೇರೆ ಯಾವದಕ್ಕೂ ಸಮಯ ಕೊಡುತ್ತಿರಲಿಲ್ಲ).

22 Paul stood in the middle of the Areopagus, and said, "You men of Athens, I perceive that you are very religious in all things.ಆಗ ಪೌಲನು ಅಂಗಾರಕದ ಬೆಟ್ಟದ ಮಧ್ಯದಲ್ಲಿ ನಿಂತು--ಅಥೇನೆಯ ಜನರೇ, ಎಲ್ಲಾ ವಿಷಯಗಳಲ್ಲಿ ನೀವು ಮೂಢ ಭಕ್ತರೆಂದು ನಾನು ಗ್ರಹಿಸುತ್ತೇನೆ.

23 For as I passed along, and observed the objects of your worship, I found also an altar with this inscription: 'TO AN UNKNOWN GOD.' What therefore you worship in ignorance, this I announce to you.ನಾನು ಹಾದು ಹೋಗುತ್ತಿರಲು ನಿಮ್ಮ ಧ್ಯಾನಗಳನ್ನು ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ--ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿ ಸುತ್ತೇನೆ.

24 The God who made the world and all things in it, he, being Lord of heaven and earth, doesn't dwell in temples made with hands,ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ.

25 neither is he served by men's hands, as though he needed anything, seeing he himself gives to all life and breath, and all things.ಇಲ್ಲವೆ ತಾನೇ ಎಲ್ಲರಿಗೆ ಜೀವವನ್ನು ಶ್ವಾಸವನ್ನು ಎಲ್ಲವನ್ನು ಕೊಡುವಾತ ನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಆರಾಧನೆ ಹೊಂದುವಾತನಲ್ಲ;

26 He made from one blood every nation of men to dwell on all the surface of the earth, having determined appointed seasons, and the boundaries of their dwellings,ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು.

27 that they should seek the Lord, if perhaps they might reach out for him and find him, though he is not far from each one of us.ಆತನು ನಮ್ಮಲ್ಲಿ ಒಬ್ಬನಿಗೂ ದೂರ ವಾದವನಲ್ಲದಿದ್ದರೂ ಅವರು ಕರ್ತನನ್ನು ತಡವಾಡಿ ಕಂಡುಕೊಂಡಾರೇನೋ ಎಂದು ಮೊದಲೇ ನೇಮಕ ವಾದ ಕಾಲಗಳನ್ನೂ ಅವರ ನಿವಾಸದ ಮೇರೆಗಳನ್ನೂ ನಿಶ್ಚಯಿಸಿದನು.

28 'For in him we live, and move, and have our being.' As some of your own poets have said, 'For we are also his offspring.'ಆತನಲ್ಲಿಯೇ ನಾವು ಜೀವಿಸುತ್ತೇವೆ ಚಲಿಸುತ್ತೇವೆ ಇರುತ್ತೇವೆ. ನಿಮ್ಮ ಸ್ವಂತ ಕವಿಗಳಲ್ಲಿಯೂ ಕೆಲವರು--ನಾವೂ ಆತನ ಸಂತಾನದವರೇ ಎಂಬ ದಾಗಿ ಹೇಳಿದ್ದಾರೆ.

29 Being then the offspring of God, we ought not to think that the Divine Nature is like gold, or silver, or stone, engraved by art and design of man.ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು.

30 The times of ignorance therefore God overlooked. But now he commands that all people everywhere should repent,ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ.

31 because he has appointed a day in which he will judge the world in righteousness by the man whom he has ordained; of which he has given assurance to all men, in that he has raised him from the dead."ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.

32 Now when they heard of the resurrection of the dead, some mocked; but others said, "We want to hear you again concerning this."ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯ ಮಾಡಿದರು; ಬೇರೆ ಕೆಲವರು--ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.

33 Thus Paul went out from among them.ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.

34 But certain men joined with him, and believed, among whom also was Dionysius the Areopagite, and a woman named Damaris, and others with them.ಆದರೂ ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊ ಪಾಗದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಅವರೊಂದಿಗೆ ಇನ್ನು ಕೆಲವರೂ ಇದ್ದರು.

Kannada Bible