Acts 17:1-9 in Kannada
Acts 17:1
ಮುಂದೆ ಅವರು ಅಂಫಿಪೊಲಿ ಅಪೊ ಲೊನ್ಯಗಳನ್ನು ದಾಟಿ ಥೆಸಲೊನೀಕಕ್ಕೆ ಬಂದರು; ಅಲ್ಲಿ ಯೆಹೂದ್ಯರದೊಂದು ಸಭಾಮಂದಿರ ವಿತ್ತು.
Acts 17:2
ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳಲ್ಲಿ ಬರಹಗಳಿಂದ ಅವರ ಸಂಗಡ ವಾದಿಸಿ
Acts 17:3
ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.
Acts 17:4
ಆಗ ಅವರಲ್ಲಿ ಕೆಲವರೂ ಭಕ್ತ ರಾಗಿದ್ದ ಗ್ರೀಕರ ದೊಡ್ಡದೊಂದು ಸಮೂಹವೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ನಂಬಿ ಪೌಲ ಸೀಲರನ್ನು ಸೇರಿಸಿಕೊಂಡರು.
Acts 17:5
ನಂಬದಿರುವ ಯೆಹೂ ದ್ಯರು ಹೊಟ್ಟೇಕಿಚ್ಚುಪಟ್ಟು ನೀಚರಾದ ಕೆಲವು ದುಷ್ಟ ರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿಕೊಂಡು ಪಟ್ಟಣದಲ್ಲೆಲ್ಲಾ ಗದ್ದಲವನ್ನೆಬ್ಬಿಸಿ ಪೌಲ ಸೀಲರನ್ನು ಜನರೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.
Acts 17:6
ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ;
Acts 17:7
ಯಾಸೋನನು ಅವರನ್ನು ಸೇರಿಸಿ ಕೊಂಡಿದ್ದಾನೆ; ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಕೈಸರನ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು.
Acts 17:8
ಜನರೂ ಪಟ್ಟಣದ ಅಧಿಕಾರಿಗಳೂ ಈ ಮಾತು ಗಳನ್ನು ಕೇಳಿ ಕಳವಳಪಟ್ಟು
Acts 17:9
ಯಾಸೋನ ಮೊದಲಾ ದವರಿಂದ ಹೊಣೆ ತೆಗೆದುಕೊಂಡು ಅವರನ್ನು ಬಿಟ್ಟುಬಿಟ್ಟರು.
Kannada Bible