Acts 15 - DBY (Kannada)
1 And certain persons, having come down from Judaea, taught the brethren, If ye shall not have been circumcised according to the custom of Moses, ye cannot be saved.ಬಳಿಕ ಕೆಲವರು ಯೂದಾಯದಿಂದ ಬಂದು--ಮೋಶೆಯ ನೇಮದ ಪ್ರಕಾರ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶ ಮಾಡುತ್ತಿದ್ದರು.
2 A commotion therefore having taken place, and no small discussion on the part of Paul and Barnabas against them, they arranged that Paul and Barnabas, and certain others from amongst them, should go up to Jerusalem to the apostles and elders about this question.ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.
3 They therefore, having been set on their way by the assembly, passed through Phoenicia and Samaria, relating the conversion of [those of] the nations. And they caused great joy to all the brethren.ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.
4 And being arrived at Jerusalem, they were received by the assembly, and the apostles, and the elders, and related all that God had wrought with them.ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
5 And some of those who were of the sect of the Pharisees, who believed, rose up from among [them], saying that they ought to circumcise them and enjoin them to keep the law of Moses.ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.
6 And the apostles and the elders were gathered together to see about this matter.ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
7 And much discussion having taken place, Peter, standing up, said to them, Brethren, *ye* know that from the earliest days God amongst you chose that the nations by my mouth should hear the word of the glad tidings and believe.ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವ ರಿಗೆ--ಜನರೇ, ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬ ಬೇಕೆಂದು ದೇವರು ಬಹಳ ದಿವಸಗಳ ಕೆಳಗೆ ನಮ್ಮೊಳ ಗಿಂದ ಆರಿಸಿಕೊಂಡದ್ದು ನಿಮಗೇ ತಿಳಿದದೆ.
8 And the heart-knowing God bore them witness, giving [them] the Holy Spirit as to us also,ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.
9 and put no difference between us and them, having purified their hearts by faith.ಇದಲ್ಲದೆ ಆತನು ನಮಗೂ ಅವರಿಗೂ ಏನೂ ಭೇದ ಮಾಡದೆ ಅವರ ಹೃದಯ ಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
10 Now therefore why tempt ye God, by putting a yoke upon the neck of the disciples, which neither our fathers nor we have been able to bear?ಹೀಗಿರುವದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೋರಲಾರದ ನೊಗವನ್ನು ನೀವು ಶಿಷ್ಯರ ಕುತ್ತಿಗೆಯ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವದು ಯಾಕೆ?
11 But we believe that we shall be saved by the grace of the Lord Jesus, in the same manner as they also.ಕರ್ತನಾದ ಯೇಸು ಕ್ರಿಸ್ತನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿ ದನು.
12 And all the multitude kept silence and listened to Barnabas and Paul relating all the signs and wonders which God had wrought among the nations by them.ಸಮೂಹದವರೆಲ್ಲರೂ ಮೌನವಾಗಿದ್ದು ಬಾರ್ನ ಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ವಿವರಿಸುವದನ್ನು ಕಿವಿಗೊಟ್ಟು ಕೇಳಿದರು.
13 And after they had held their peace, James answered, saying, Brethren, listen to me:ಅವರು ಮೌನವಾಗಿದ್ದಾಗ ಯಾಕೋ ಬನು ಹೇಳಿದ್ದೇನಂದರೆ--ಜನರೇ, ಸಹೋದರರೇ, ನಾನು ಹೇಳುವದನ್ನು ಕೇಳಿರಿ;
14 Simon has related how God first visited to take out of [the] nations a people for his name.ದೇವರು ಮೊದಲೇ ಅನ್ಯಜನರನ್ನು ದರ್ಶಿಸಿ ತನ್ನ ಹೆಸರಿಗಾಗಿ ಅವರೊ ಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.
15 And with this agree the words of the prophets; as it is written:ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ--
16 After these things I will return, and will rebuild the tabernacle of David which is fallen, and will rebuild its ruins, and will set it up,ಇದಾದ ಮೇಲೆ ನಾನು ಹಿಂತಿರುಗಿ ಬಂದು ಬಿದ್ದು ಹೋಗಿರುವ ದಾವೀದನ ಗುಡಾರವನ್ನು ತಿರಿಗಿ ಕಟ್ಟುವೆನು. ಅದರಲ್ಲಿ ಹಾಳಾದದ್ದನ್ನು ನಾನು ತಿರಿಗಿ ಸರಿಮಾಡಿಸಿ ಅದನ್ನು ನೆಟ್ಟಗೆ ನಿಲ್ಲಿಸುವೆನು.
17 so that the residue of men may seek out the Lord, and all the nations on whom my name is invoked, saith [the] Lord, who does these thingsಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.
18 known from eternity.ದೇವರು ತನ್ನ ಕಾರ್ಯಗಳನ್ನೆಲ್ಲಾ ಲೋಕಾದಿಯಿಂದ ತಿಳಿದಿದ್ದಾನೆ.
19 Wherefore *I* judge, not to trouble those who from the nations turn to God;ಹೀಗಿರಲಾಗಿ ಅನ್ಯಜನರಿಂದ ದೇವರ ಕಡೆಗೆ ತಿರುಗಿಕೊಂಡವರನ್ನು ನಾವು ತೊಂದರೆಪಡಿ ಸಬಾರದೆಂಬದು ನನ್ನ ಅಭಿಪ್ರಾಯವಾಗಿದೆ.
20 but to write to them to abstain from pollutions of idols, and from fornication, and from what is strangled, and from blood.ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.
21 For Moses, from generations of old, has in every city those who preach him, being read in the synagogues every sabbath.ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
22 Then it seemed good to the apostles and to the elders, with the whole assembly, to send chosen men from among them with Paul and Barnabas to Antioch, Judas called Barsabas and Silas, leading men among the brethren,ಆಗ ಅಪೋಸ್ತಲರೂ ಹಿರಿಯರೂ ಸರ್ವಸಭೆಯ ಸಮ್ಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯಸ್ಥರಾಗಿದ್ದ ಬಾರ್ಸ ಬ್ಬನೆನಿಸಿಕೊಳ್ಳುವ ಯೂದನನ್ನೂ ಸೀಲನನ್ನೂ ಆರಿಸಿ ಕೊಂ
23 having by their hand written [thus]: The apostles, and the elders, and the brethren, to the brethren who are from among [the] nations at Antioch, and [in] Syria and Cilicia, greeting:ಅವರು ಬರೆದುಕೊಟ್ಟದ್ದು ಈ ರೀತಿ ಯಲ್ಲಿತ್ತು; ಅಪೊಸ್ತಲರೂ ಹಿರಿಯರೂ ಸಹೋದರರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೆ ಮಾಡುವ ವಂದನೆ;
24 Inasmuch as we have heard that some who went out from amongst us have troubled you by words, upsetting your souls, [saying that ye must be circumcised and keep the law]; to whom we gave no commandment;ನಮ್ಮಿಂದ ಅಪ್ಪಣೆಹೊಂದದೆ ನಮ್ಮೊಳಗಿಂದ ಹೊರಟುಹೋದ ಕೆಲವರು--ನೀವು ಸುನ್ನತಿ ಮಾಡಿಸಿಕೊಂಡು ನ್ಯಾಯಪ್ರಮಾಣವನ್ನು ಅನುಸರಿಸಬೇಕೆಂದು ತಮ್ಮ ಮಾತುಗಳಿಂದ ನಿಮ್ಮನ್ನು ತೊಂದರೆಪಡಿಸಿ ನಿಮ್ಮ ಮನಸ್ಸುಗಳನ್ನು ಕಳವಳ ಗೊಳಿಸಿದ್ದಾರೆಂದು ಕೇಳಿದ್ದರಿಂದ
25 it seemed good to us, having arrived at a common judgment, to send chosen men to you with our beloved Barnabas and Paul,ನಾವು ಒಮ್ಮನ ಸ್ಸಾಗಿ ಸೇರಿಬಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾಗಿರುವ
26 men who have given up their lives for the name of our Lord Jesus Christ.ನಮ್ಮ ಪ್ರಿಯ ಬಾರ್ನಬ ಸೌಲರ ಜೊತೆಯಲ್ಲಿ ನಾವು ಆರಿಸಿಕೊಂಡವರನ್ನು ನಿಮ್ಮ ಬಳಿಗೆ ಕಳುಹಿ ಸುವದು ಯುಕ್ತವೆಂದು ನಮಗೆ ತೋಚಿತು.
27 We have therefore sent Judas and Silas, who themselves also will tell you by word [of mouth] the same things.ಆದಕಾರಣ ಈ ಮಾತುಗಳನ್ನು ಬಾಯಿಂದ ಸಹ ತಿಳಿಸುವಂತೆ ನಾವು ಯೂದನನ್ನೂ ಸೀಲನನ್ನೂ ಕಳುಹಿಸಿಕೊಟ್ಟಿದ್ದೇವೆ.
28 For it has seemed good to the Holy Spirit and to us to lay upon you no greater burden than these necessary things:ಯಾಕಂದರೆ ಅವಶ್ಯವಾದ ಈ ವಿಷಯಗಳಿಗಿಂತ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ಯುಕ್ತ ವೆಂದು ತೋಚಿತು.
29 to abstain from things sacrificed to idols, and from blood, and from what is strangled, and from fornication; keeping yourselves from which ye will do well. Farewell.ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.
30 They therefore, being let go, came to Antioch, and having gathered the multitude delivered to [them] the epistle.ಹೀಗೆ ಅವರು ಕಳುಹಿಸಲ್ಪಟ್ಟು ಅಂತಿಯೋಕ್ಯಕ್ಕೆ ಬಂದರು; ಅವರು ಸಮೂಹವನ್ನು ಕೂಡಿಸಿ ಆ ಪತ್ರಿಕೆಯನ್ನು ಒಪ್ಪಿಸಿದರು.
31 And having read it, they rejoiced at the consolation.ಅವರು ಅದನ್ನು ಓದಿ ಆದರಣೆ ಹೊಂದಿ ಸಂತೋಷಪಟ್ಟರು.
32 And Judas and Silas, being themselves also prophets, exhorted the brethren with much discourse, and strengthened them.ಯೂದನೂ ಸೀಲನೂ ತಾವೇ ಪ್ರವಾದಿಗಳಾಗಿದ್ದದರಿಂದ ಸಹೋ ದರರನ್ನು ಅನೇಕ ಮಾತುಗಳಿಂದ ಪ್ರಭೋದಿಸಿ ದೃಢ ಪಡಿಸಿದರು.
33 And having passed some time [there], they were let go in peace from the brethren to those who sent them.ಅಲ್ಲಿ ಕೆಲವು ಕಾಲ ಕಳೆದ ನಂತರ ಸಮಾಧಾನದಿಂದ ಅಪೊಸ್ತಲರ ಬಳಿಗೆ ತಿರಿಗಿ ಹೋಗುವದಕ್ಕೆ ಸಹೋದರರಿಂದ ಅಪ್ಪಣೆ ತೆಗೆದು ಕೊಂಡರು.
35 And Paul and Barnabas stayed in Antioch, teaching and announcing the glad tidings, with many others also, of the word of the Lord.ಆದರೆ ಪೌಲನೂ ಬಾರ್ನಬನೂ ಅಂತಿಯೋಕ್ಯ ದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಕರ್ತನ ವಾಕ್ಯವನ್ನು ಉಪದೇಶ ಮಾಡುತ್ತಾ ಸಾರುತ್ತಾ ಇದ್ದರು.
36 But after certain days Paul said to Barnabas, Let us return now and visit the brethren in every city where we have announced the word of the Lord, [and see] how they are getting on.ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ--ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ತಿರಿಗಿ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು.
37 And Barnabas proposed to take with [them] John also, called Mark;ಬಾರ್ನಬನು ಮಾರ್ಕನೆನಿಸಿ ಕೊಳ್ಳುವ ಯೋಹಾನನನ್ನು ತಮ್ಮ ಸಂಗಡ ಕರೆದು ಕೊಂಡು ಹೋಗಬೇಕೆಂದು ನಿರ್ಧರಿಸಿದನು.
38 but Paul thought it not well to take with them him who had abandoned them, [going back] from Pamphylia, and had not gone with them to the work.ಆದರೆ ಪೌಲನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಿಂದ ತಮ್ಮನ್ನು ಬಿಟ್ಟು ಹೋದವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವದು ತಕ್ಕದ್ದಲ್ಲ ವೆಂದು ನೆನಸಿದನು.
39 There arose therefore very warm feeling, so that they separated from one another; and Barnabas taking Mark sailed away to Cyprus;ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿ ದರು. ಹೀಗೆ ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರ ಮಾರ್ಗವಾಗಿ ಕುಪ್ರಕ್ಕೆ ಹೋದನು.
40 but Paul having chosen Silas went forth, committed by the brethren to the grace of God.ಆದರೆ ಪೌಲನು ಸಹೋದರರಿಂದ ದೇವರ ಕೃಪೆಗೆ ಒಪ್ಪಿಸಲ್ಪಟ್ಟು ಸೀಲನನ್ನು ಆರಿಸಿಕೊಂಡು ಹೊರಟನು.
41 And he passed through Syria and Cilicia, confirming the assemblies.ಅವನು ಸಭೆಗಳನ್ನು ದೃಢಪಡಿಸುತ್ತಾ ಸಿರಿಯ ಮತ್ತು ಕಿಲಿಕ್ಯಗಳ ಮಾರ್ಗವಾಗಿ ಹೋದನು.
Kannada Bible