Acts 15:1-21 in Kannada
Acts 15:1
ಬಳಿಕ ಕೆಲವರು ಯೂದಾಯದಿಂದ ಬಂದು--ಮೋಶೆಯ ನೇಮದ ಪ್ರಕಾರ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶ ಮಾಡುತ್ತಿದ್ದರು.
Acts 15:2
ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.
Acts 15:3
ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.
Acts 15:4
ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
Acts 15:5
ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.
Acts 15:6
ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
Acts 15:7
ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವ ರಿಗೆ--ಜನರೇ, ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬ ಬೇಕೆಂದು ದೇವರು ಬಹಳ ದಿವಸಗಳ ಕೆಳಗೆ ನಮ್ಮೊಳ ಗಿಂದ ಆರಿಸಿಕೊಂಡದ್ದು ನಿಮಗೇ ತಿಳಿದದೆ.
Acts 15:8
ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.
Acts 15:9
ಇದಲ್ಲದೆ ಆತನು ನಮಗೂ ಅವರಿಗೂ ಏನೂ ಭೇದ ಮಾಡದೆ ಅವರ ಹೃದಯ ಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
Acts 15:10
ಹೀಗಿರುವದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೋರಲಾರದ ನೊಗವನ್ನು ನೀವು ಶಿಷ್ಯರ ಕುತ್ತಿಗೆಯ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವದು ಯಾಕೆ?
Acts 15:11
ಕರ್ತನಾದ ಯೇಸು ಕ್ರಿಸ್ತನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿ ದನು.
Acts 15:12
ಸಮೂಹದವರೆಲ್ಲರೂ ಮೌನವಾಗಿದ್ದು ಬಾರ್ನ ಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ವಿವರಿಸುವದನ್ನು ಕಿವಿಗೊಟ್ಟು ಕೇಳಿದರು.
Acts 15:13
ಅವರು ಮೌನವಾಗಿದ್ದಾಗ ಯಾಕೋ ಬನು ಹೇಳಿದ್ದೇನಂದರೆ--ಜನರೇ, ಸಹೋದರರೇ, ನಾನು ಹೇಳುವದನ್ನು ಕೇಳಿರಿ;
Acts 15:14
ದೇವರು ಮೊದಲೇ ಅನ್ಯಜನರನ್ನು ದರ್ಶಿಸಿ ತನ್ನ ಹೆಸರಿಗಾಗಿ ಅವರೊ ಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.
Acts 15:15
ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ--
Acts 15:16
ಇದಾದ ಮೇಲೆ ನಾನು ಹಿಂತಿರುಗಿ ಬಂದು ಬಿದ್ದು ಹೋಗಿರುವ ದಾವೀದನ ಗುಡಾರವನ್ನು ತಿರಿಗಿ ಕಟ್ಟುವೆನು. ಅದರಲ್ಲಿ ಹಾಳಾದದ್ದನ್ನು ನಾನು ತಿರಿಗಿ ಸರಿಮಾಡಿಸಿ ಅದನ್ನು ನೆಟ್ಟಗೆ ನಿಲ್ಲಿಸುವೆನು.
Acts 15:17
ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.
Acts 15:18
ದೇವರು ತನ್ನ ಕಾರ್ಯಗಳನ್ನೆಲ್ಲಾ ಲೋಕಾದಿಯಿಂದ ತಿಳಿದಿದ್ದಾನೆ.
Acts 15:19
ಹೀಗಿರಲಾಗಿ ಅನ್ಯಜನರಿಂದ ದೇವರ ಕಡೆಗೆ ತಿರುಗಿಕೊಂಡವರನ್ನು ನಾವು ತೊಂದರೆಪಡಿ ಸಬಾರದೆಂಬದು ನನ್ನ ಅಭಿಪ್ರಾಯವಾಗಿದೆ.
Acts 15:20
ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.
Acts 15:21
ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
Kannada Bible