Acts 11 - BBE (Kannada)
1 Now the Apostles and the brothers who were in Judaea had news that the word of God had been given to the Gentiles.ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬದನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.
2 And when Peter came to Jerusalem, those who kept the rule of circumcision had an argument with him,ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿ ಯವರು ಅವನ ಕೂಡ ವಿವಾದಿಸುತ್ತಾ--
3 Saying, You went to men without circumcision, and took food with them.ನೀನು ಸುನ್ನತಿಯಿಲ್ಲದವರ ಬಳಿಗೆ ಹೋಗಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಕೇಳಿದರು.
4 But Peter gave them an account of it all in order, saying to them,ಆದರೆ ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿ ನಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ--
5 I was in the town of Joppa, at prayer: and falling into a deep sleep, I saw in a vision a vessel like a great cloth let down from heaven, and it came down to me:ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿ ದ್ದಾಗ ಪರವಶನಾಗಿದ್ದ ನನಗೆ ಒಂದು ದರ್ಶನ ವಾಯಿತು; ಅದೇನಂದರೆ, ಆಕಾಶದಿಂದ ನಾಲ್ಕು ಮೂಲೆಗಳಿಂದ ದೊಡ್ಡ ಜೋಳಿಗೆಯಂತಿರುವ ಒಂದು ಪಾತ್ರೆಯು ಇಳಿಸಲ್ಪಟ್ಟು ನನ್ನ ಬಳಿಗೆ ಬಂತು.
6 And looking on it with attention I saw in it all sorts of beasts and birds.ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೊಡಿದಾಗ ಭೂಮಿಯ ಮೇಲಿರುವ ನಾಲ್ಕು ಕಾಲು ಗಳುಳ್ಳ ಪಶುಗಳನ್ನೂ ಕಾಡು ಮೃಗಗಳನ್ನೂ ಹರಿ ದಾಡುವ ಕ್ರಿಮಿಕೀಟಗಳನ್ನೂ ಆಕಾಶದ ಪಕ್ಷಿಗಳನ್ನೂ ಕಂಡೆನು.
7 And a voice came to my ears saying, Come, Peter; take them for food.ಆಗ--ಪೇತ್ರನೇ, ಎದ್ದು ಕೊಂದು ತಿನ್ನು ಎಂದು ನನಗೆ ಹೇಳುವ ಧ್ವನಿಯನ್ನು ಕೇಳಿದೆನು.
8 But I said, No, Lord; for nothing common or unclean has ever come into my mouth.ಆದರೆ ನಾನು--ಕರ್ತನೇ, ಹಾಗಲ್ಲ; ಹೊಲೆಯಾದ ದ್ದಾಗಲೀ ಅಶುದ್ಧವಾದದ್ದಾಗಲೀ ಯಾವದೂ ಯಾವ ಸಮಯದಲ್ಲೂ ನನ್ನ ಬಾಯೊಳಗೆ ಸೇರಲಿಲ್ಲ ಎಂದು ಹೇಳಿದೆನು;
9 But the voice, coming a second time from heaven, said, What God has made clean, do not you make common.ಅದಕ್ಕೆ--ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆಯೆನ್ನಬಾರದು ಎಂಬದಾಗಿ ತಿರಿಗಿ ಆಕಾಶದಿಂದ ಧ್ವನಿಯು ನನಗೆ ಉತ್ತರಕೊಟ್ಟಿತು.
10 And this was done three times, and they were all taken up again into heaven.ಇದು ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು.
11 And at that minute, three men, sent from Caesarea, came to the house where we were.ಆಗ ಇಗೋ, ತಕ್ಷಣವೇ ಮೂರು ಮಂದಿ ಮನುಷ್ಯರು ನಾನಿದ್ದ ಮನೆಗೆ ಆಗಲೇ ಬಂದಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.
12 And the Spirit gave me orders to go with them, doubting nothing. And these six brothers came with me; and we went into that man's house:ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗಬೇಕೆಂದು ಆತ್ಮನು ನನಗೆ ಅಪ್ಪಣೆಕೊಟ್ಟನು; ಇದಲ್ಲದೆ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು; ನಾವು ಆ ಮನುಷ್ಯನ ಮನೆಯೊಳಕ್ಕೆ ಸೇರಿದೆವು.
13 And he gave us an account of how he had seen the angel in his house, saying, Send to Joppa, and get Simon, named Peter, to come to you;ಅವನು ತನ್ನ ಮನೆಯಲ್ಲಿ ಒಬ್ಬ ದೂತನನ್ನು ಕಂಡನೆಂದು ನಮಗೆ ತಿಳಿಸಿದನು. ಆ ದೂತನು ಅವನಿಗೆ--ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು;
14 Who will say words to you through which you and all your family may get salvation.ಅವನು ನಿನಗೆ ವಾಕ್ಯ ಗಳನ್ನು ಹೇಳುವನು; ಆ ವಾಕ್ಯಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.
15 And, while I was talking to them, the Holy Spirit came on them, as on us at first.ನಾನು ಮಾತನಾ ಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮನು ಮೊದಲು ನಮ್ಮ ಮೇಲೆ ಬಂದಹಾಗೆ ಅವರ ಮೇಲೆಯೂ ಬಂದನು.
16 And the words of the Lord came into my mind, how he said, The baptism of John was with water, but you will have baptism with the Holy Spirit.ಆಗ--ಯೋಹಾನನು ನಿಜವಾಗಿಯೂ ನೀರಿನ ಬಾಪ್ತಿಸ್ಮ ಮಾಡಿಸಿದನು; ನೀವಾದರೋ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಕರ್ತನು ಹೇಳಿದ ಮಾತು ನನ್ನ ನೆನಪಿಗೆ ಬಂತು.
17 If then God gave them, when they had faith in the Lord Jesus Christ, the same as he gave to us, who was I to go against God?ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ದೇವರು ಕೊಟ್ಟ ದಾನಕ್ಕೆ ಸರಿಯಾದ ದಾನವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಎಷ್ಟರವನು ಎಂದು ಹೇಳಿದನು.
18 And hearing these things they said nothing more, but gave glory to God, saying, Then to the Gentiles as to us has God given a change of heart, so that they may have life.ಅವರು ಇವುಗಳನ್ನು ಕೇಳಿ ಮೌನವಾಗಿದ್ದು ದೇವ ರನ್ನು ಕೊಂಡಾಡಿ--ಹಾಗಾದರೆ ಅನ್ಯ ಜನಾಂಗದವ ರಿಗೂ ಜೀವಕ್ಕಾಗಿ ಮಾನಸಾಂತರವನ್ನು ದೇವರು ದಯಪಾಲಿಸಿದ್ದಾನೆ ಎಂದು ಹೇಳಿದರು.
19 Then those who had gone away at the time of the trouble about Stephen, went as far as Phoenicia and Cyprus, preaching to the Jews only.ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೊದವರು ಯೆಹೂದ್ಯರಿಗೇ ಹೊರತು ಮತ್ತಾ ರಿಗೂ ವಾಕ್ಯವನ್ನು ಸಾರದೆ ಫೊಯಿನಿಕೆ ಕುಪ್ರ ಅಂತಿ ಯೋಕ್ಯಗಳ ವರೆಗೂ ಸಂಚರಿಸಿದರು.
20 But some of them, men of Cyprus and Cyrene, when they came to Antioch, gave the good news about the Lord Jesus to the Greeks.ಅವರಲ್ಲಿ ಕೆಲವರು ಕುಪ್ರ ಮತ್ತು ಕುರೇನ್ಯದವರಾಗಿದ್ದರು. ಅವರು ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾಗಿ ಸಾರಿದರು.
21 And the power of the Lord was with them, and a great number had faith and were turned to the Lord.ಕರ್ತನ ಹಸ್ತವು ಅವರೊಂದಿಗಿದ್ದದ ರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿ ಕೊಂಡರು.
22 And news of them came to the ears of the church at Jerusalem: and they sent Barnabas as far as Antioch:ಈ ವಿಷಯಗಳ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.
23 Who, when he came and saw the grace of God, was glad; and he made clear to them the need of keeping near the Lord with all the strength of their hearts:ಅವನು ಬಂದು ದೇವರ ಕೃಪೆಯನ್ನು ನೋಡಿ ಸಂತೋಷಪಟ್ಟು ದೃಢಮನಸ್ಸಿನಿಂದ ಕರ್ತನನ್ನು ಅಂಟಿ ಕೊಂಡಿರಬೇಕೆಂದು ಅವರೆಲ್ಲರನ್ನು ಪ್ರೇರೇಪಿಸಿದನು.
24 For he was a good man and full of the Holy Spirit and of faith: and a great number were joined to the Lord.ಅವನು ಒಳ್ಳೆಯವನಾಗಿದ್ದು ಪವಿತ್ರಾತ್ಮನಿಂದಲೂ ನಂಬಿಕೆಯಿಂದಲೂ ತುಂಬಿದವನಾಗಿದ್ದನು; ಬಹು ಮಂದಿ ಕರ್ತನನ್ನು ಸೇರಿಕೊಂಡರು.
25 Then he went on to Tarsus, looking for Saul;ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೊರಟುಹೊಗಿ
26 And when he had come across him, he took him to Antioch. And they were with the church there for a year, teaching the people; and the disciples were first given the name of Christians in Antioch.ಅವನನ್ನು ಕಂಡುಕೊಂಡು ಅಂತಿ ಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶ ಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.
27 Now in those days prophets came from Jerusalem to Antioch.ಆ ದಿವಸಗಳಲ್ಲಿ ಪ್ರವಾದಿಗಳಾಗಿದ್ದವರು ಯೆರೂ ಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
28 And one of them, named Agabus, said publicly through the Spirit that there would be serious need of food all over the earth: which came about in the time of Claudius.ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಆತ್ಮನಿಂದ ಸೂಚಿಸಿದನು. ಅದು ಕ್ಲೌದ್ಯ ಕೈಸರನ ದಿವಸಗಳಲ್ಲಿ ಉಂಟಾಯಿತು.
29 And the disciples, everyone as he was able, made a decision to send help to the brothers living in Judaea:ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.
30 Which they did, sending it to the rulers of the church by the hand of Barnabas and Saul.ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
Kannada Bible