Acts 1:1-5 in Kannada
Acts 1:1
ಓ ಥೆಯೊಫಿಲನೇ, ಯೇಸು ತಾನು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮನ ಮುಖಾಂತರ ಆಜ್ಞೆಗಳನ್ನು ಕೊಟ್ಟ ತರುವಾಯ
Acts 1:2
ಆತನು ಮೇಲಕ್ಕೆ ಎತ್ತಲ್ಪಟ್ಟ ದಿವಸದ ವರೆಗೆ ತಾನು ಮಾಡುವದಕ್ಕೂ ಬೋಧಿಸುವದಕ್ಕೂ ಪ್ರಾರಂಭಿಸಿದ್ದೆಲ್ಲವನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು.
Acts 1:3
ಆತನು ಶ್ರಮೆಯನ್ನನುಭವಿಸಿದ ಮೇಲೆ ದೃಢವಾದ ಅನೇಕ ಪ್ರಮಾಣಗಳಿಂದ ತಾನು ಜೀವಂತನಾಗಿ ದ್ದನೆಂದು ಅಪೊಸ್ತಲರಿಗೆ ತನ್ನನ್ನು ತೋರಿಸಿಕೊಂಡು ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡುತ್ತಿದ್ದನು.
Acts 1:4
ಆತನು ಅವರೊಂದಿಗೆ ಕೂಡಿಕೊಂಡಿದ್ದಾಗ--ನೀವು ಯೆರೂಸಲೇಮಿನಿಂದ ಹೊರಟುಹೋಗದೆ ನನ್ನಿಂದ ಕೇಳಿದ ತಂದೆಯ ವಾಗ್ದಾನಕೋಸ್ಕರ ಕಾಯ ಬೇಕೆಂದು ಅವರಿಗೆ ಅಪ್ಪಣೆಕೊಟ್ಟನು.
Acts 1:5
ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು.
Kannada Bible