Job 40:10 in Kannada

Kannada Kannada Bible Job Job 40 Job 40:10

Job 40:10
ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ.

Job 40:9Job 40Job 40:11

Job 40:10 in Other Translations

King James Version (KJV)
Deck thyself now with majesty and excellency; and array thyself with glory and beauty.

American Standard Version (ASV)
Deck thyself now with excellency and dignity; And array thyself with honor and majesty.

Bible in Basic English (BBE)
See now the Great Beast, whom I made, even as I made you; he takes grass for food, like the ox.

Darby English Bible (DBY)
Deck thyself now with glory and excellency, and clothe thyself with majesty and splendour.

Webster's Bible (WBT)
Behold now behemoth, which I made with thee; he eateth grass as an ox.

World English Bible (WEB)
"Now deck yourself with excellency and dignity. Array yourself with honor and majesty.

Young's Literal Translation (YLT)
Put on, I pray thee, excellency and loftiness, Yea, honour and beauty put on.

Deck
עֲדֵ֥הʿădēuh-DAY
thyself
now
נָ֣אnāʾna
with
majesty
גָֽא֣וֹןgāʾônɡa-ONE
and
excellency;
וָגֹ֑בַהּwāgōbahva-ɡOH-va
array
and
וְה֖וֹדwĕhôdveh-HODE
thyself
with
glory
וְהָדָ֣רwĕhādārveh-ha-DAHR
and
beauty.
תִּלְבָּֽשׁ׃tilbāšteel-BAHSH

Cross Reference

Psalm 93:1
ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.

Isaiah 59:17
ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.

Psalm 149:4
ಕರ್ತನು ತನ್ನ ಜನರಲ್ಲಿ ಇಷ್ಟಪಡುತ್ತಾನೆ; ದೀನರನ್ನು ರಕ್ಷಣೆಯಿಂದ ಅಲಂಕರಿಸುತ್ತಾನೆ.

Jude 1:24
ಎಡವಿಬೀಳದಂತೆ ನಿಮ್ಮನ್ನು ಕಾಪಾಡುವದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿ ಗಳನ್ನಾಗಿ ಅತ್ಯಂತ ಹರ್ಷದೊಡನೆ ನಿಲ್ಲಿಸುವದಕ್ಕೂ ಶಕ್ತನಾಗಿರುವ

2 Peter 1:16
ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಆತನ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿ ಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವ ರಾಗಿಯೇ ತಿಳಿಯಪಡಿಸಿದೆವು.

1 Corinthians 15:54
ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ--ಜಯವು ಮರಣವನ್ನು ನುಂಗಿತು ಎಂಬದೇ.

Matthew 6:13
ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.

Isaiah 4:2
ಆ ದಿನದಲ್ಲಿ ಕರ್ತನ ಕೊಂಬೆಯು ಸುಂದರವಾ ಗಿಯೂ ಮಹಿಮೆಯುಳ್ಳದ್ದಾಗಿಯೂ ಇರುವದು. ಭೂಮಿಯ ಫಲವು ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಉತ್ತಮವಾಗಿಯೂ ರಮ್ಯವಾಗಿಯೂ ಇರುವದು.

Psalm 104:1
ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ.

Psalm 90:16
ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.

Psalm 50:2
ಸೌಂದರ್ಯದ ಪರಿಪೂರ್ಣತೆಯಾದ ಚೀಯೋನಿ ನಿಂದ ದೇವರು ಪ್ರಕಾಶಿಸಿದ್ದಾನೆ.

Psalm 45:3
ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ.

Psalm 21:5
ನ್ನ ರಕ್ಷಣೆಯಲ್ಲಿ ಅವನ ಹೆಚ್ಚಳವು ದೊಡ್ಡದಾಗಿದೆ, ಗೌರವವನ್ನೂ ಘನತೆಯನ್ನೂ ಅವನ ಮೇಲೆ ಇಡುತ್ತೀ.

Job 39:19
ನೀನು ಕುದುರೆಗೆ ತ್ರಾಣವನ್ನು ಕೊಟ್ಟಿದ್ದೀಯೋ? ಅದರ ಕುತ್ತಿಗೆಗೆ ಗುಡುಗನ್ನು ಹೊದ್ದಿಸಿದಿಯೋ?

1 Chronicles 29:11
ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ.

Exodus 28:2
ನಿನ್ನ ಸಹೋದರನಾದ ಆರೋನನ ಗೌರವ ಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.