Bible

2 Timothy 2 - YLT (Kannada)

1 Thou, therefore, my child, be strong in the grace that `is' in Christ Jesus,ಆದದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲ ವಾಗಿರು.

2 and the things that thou didst hear from me through many witnesses, these things be committing to stedfast men, who shall be sufficient also others to teach;ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನೇ ಇತರರಿಗೆ ಸಹ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.

3 thou, therefore, suffer evil as a good soldier of Jesus Christ;ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು.

4 no one serving as a soldier did entangle himself with the affairs of life, that him who did enlist him he may please;ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡು ತ್ತಾನೆ.

5 and if also any one may strive, he is not crowned, except he may strive lawfully;ಇದಲ್ಲದೆ ಯಾವನಾದರೂ ಪ್ರವೀಣತೆಗಾಗಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡ ದಿದ್ದರೆ ಅವನಿಗೆ ಕಿರೀಟ ದೊರೆಯುವದಿಲ್ಲ.

6 the labouring husbandman it behoveth first of the fruits to partake;ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು.

7 be considering what things I say, for the Lord give to thee understanding in all things.ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ.

8 Remember Jesus Christ, raised out of the dead, of the seed of David, according to my good news,ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ.

9 in which I suffer evil -- unto bonds, as an evil-doer, but the word of God hath not been bound;ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.

10 because of this all things do I endure, because of the choice ones, that they also salvation may obtain that `is' in Christ Jesus, with glory age-during.ಆದ ಕಾರಣ (ದೇವರು) ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ.

11 Stedfast `is' the word: For if we died together -- we also shall live together;ಇದು ನಂಬತಕ್ಕ ದ್ದಾಗಿದೆ, ಏನೆಂದರೆ--ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ನಾವು ಸಹ ಜೀವಿಸುವೆವು.

12 if we do endure together -- we shall also reign together; if we deny `him', he also shall deny us;ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು.

13 if we are not stedfast, he remaineth stedfast; to deny himself he is not able.ನಾವು ಅಪನಂಬಿಕೆ ಯುಳ್ಳವರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ಆತನು ತನ್ನನ್ನು ತಾನು ಅಲ್ಲಗಳೆಯಲಾರನು.

14 These things remind `them' of, testifying fully before the Lord -- not to strive about words to nothing profitable, but to the subversion of those hearing;ಈ ವಿಷಯಗಳನ್ನು ಅವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವದೇ ಹೊರತು ಯಾವ ಪ್ರಯೋಜನಕ್ಕೂಬಾರದ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ಕರ್ತನ ಮುಂದೆ ಖಂಡಿತ ವಾಗಿ ಹೇಳು.

15 be diligent to present thyself approved to God -- a workman irreproachable, rightly dividing the word of the truth;ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿ ಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು.

16 and the profane vain talkings stand aloof from, for to more impiety they will advance,ಆದರೆ ಅಶುದ್ಧವಾದ ಹರಟೆಮಾತುಗಳನ್ನು ನಿರಾಕರಿಸು; ಅವುಗಳಿಂದ ಹೆಚ್ಚೆಚ್ಚಾಗಿ ಭಕ್ತಿಹೀನತೆಯು ಉಂಟಾಗುವದು.

17 and their word as a gangrene will have pasture, of whom is Hymenaeus and Philetus,ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ;

18 who concerning the truth did swerve, saying the rising again to have already been, and do overthrow the faith of some;ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ.

19 sure, nevertheless, hath the foundation of God stood, having this seal, `The Lord hath known those who are His,' and `Let him depart from unrighteousness -- every one who is naming the name of Christ.'ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.

20 And in a great house there are not only vessels of gold and of silver, but also of wood and of earth, and some to honour, and some to dishonour:ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಕೆಲವು ಗೌರವಕ್ಕೂ ಕೆಲವು ಅಗೌರವಕ್ಕೂ ಇರುತ್ತವೆ.

21 if, then, any one may cleanse himself from these, he shall be a vessel to honour, sanctified and profitable to the master -- to every good work having been prepared,ಒಬ್ಬನು ತನ್ನನ್ನು ಇಂಥವುಗಳಿಂದ ಶುದ್ಧಪಡಿಸಿಕೊಂಡರೆ ಅವನು ಪ್ರತಿಷ್ಠಿತನೂ ಯಜಮಾನನ ಬಳಿಕೆಗೆ ಯೋಗ್ಯನೂ ಸಕಲಸತ್ಕಾರ್ಯಕ್ಕೆ ಸಿದ್ಧನೂ ಆಗಿದ್ದು ಗೌರವಕ್ಕೆ ಪಾತ್ರೆಯಾಗಿರುವನು.

22 and the youthful lusts flee thou, and pursue righteousness, faith, love, peace, with those calling upon the Lord out of a pure heart;ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.

23 and the foolish and uninstructed questions be avoiding, having known that they beget strife,ಮೂಢರ ಬುದ್ಧಿಯಿಲ್ಲದ ವಿಚಾರಗಳು ಜಗಳಗಳಿಗೆ ಕಾರಣವಾಗಿವೆ ಎಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.

24 and a servant of the Lord it behoveth not to strive, but to be gentle unto all, apt to teach, patient under evil,ಕರ್ತನ ಸೇವ ಕನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ತಾಳ್ಮೆಯುಳ್ಳವನೂ ಆಗಿರಬೇಕು.

25 in meekness instructing those opposing -- if perhaps God may give to them repentance to an acknowledging of the truth,ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.

26 and they may awake out of the devil's snare, having been caught by him at his will.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.

Kannada Bible