1ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು.And David said, Is there yet any that is left of the house of Saul, that I may show him kindness for Jonathan's sake?
2ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು.And there was of the house of Saul a servant whose name was Ziba. And when they had called him unto David, the king said unto him, Art thou Ziba? And he said, Thy servant is he.
3ಅರಸನು ಅವನಿಗೆ--ನಾನು ಅವನಿಗೆ ದೇವರ ದಯೆತೋರಿಸುವ ಹಾಗೆ ಸೌಲನ ಮನೆಯವರಲ್ಲಿ ಇನ್ನೂ ಯಾವನಾ ದರೂ ಇದ್ದಾನೋ ಅಂದನು. ಆಗ ಚೀಬನು ಅರಸ ನಿಗೆ--ಯೋನಾತಾನನಿಗೆ ಎರಡು ಕಾಲುಕುಂಟಾದ ಒಬ್ಬ ಮಗನಿದ್ದಾನೆ ಅಂದನು.And the king said, Is there not yet any of the house of Saul, that I may show the kindness of God unto him? And Ziba said unto the king, Jonathan hath yet a son, which is lame on his feet.
4ಅವನು ಎಲ್ಲಿ ಇದ್ದಾ ನೆಂದು ಅರಸನು ಅವನನ್ನು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಲ್ಲಿ ಇದ್ದಾನೆ ಅಂದನು.And the king said unto him, Where is he? And Ziba said unto the king, Behold, he is in the house of Machir, the son of Ammiel, in Lodebar.
5ಅರಸನಾದ ದಾವೀದನು ಅವ ನನ್ನು ಆಗ ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಿಂದ ಕರೆಕಳುಹಿ ಸಿದನು.Then king David sent, and fetched him out of the house of Machir, the son of Ammiel, from Lodebar.
6ಸೌಲನ ಮಗನಾಗಿರುವ ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರಮಾಡಿದನು.Now when Mephibosheth, the son of Jonathan, the son of Saul, was come unto David, he fell on his face, and did reverence. And David said, Mephibosheth. And he answered, Behold thy servant!
7ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು.And David said unto him, Fear not: for I will surely show thee kindness for Jonathan thy father's sake, and will restore thee all the land of Saul thy father; and thou shalt eat bread at my table continually.
8ಆಗ ಅವನು ಅಡ್ಡಬಿದ್ದು--ನೀನು ನನ್ನಂಥ ಸತ್ತನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು ಅಂದನು.And he bowed himself, and said, What is thy servant, that thou shouldest look upon such a dead dog as I am?
9ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ.Then the king called to Ziba, Saul's servant, and said unto him, I have given unto thy master's son all that pertained to Saul and to all his house.
10ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.Thou therefore, and thy sons, and thy servants, shall till the land for him, and thou shalt bring in the fruits, that thy master's son may have food to eat: but Mephibosheth thy master's son shall eat bread alway at my table. Now Ziba had fifteen sons and twenty servants.
11ಆಗ ಚೀಬನು ಅರಸನಿಗೆ--ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು ಅಂದನು. ಅರಸನ ಕುಮಾರ ರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು.Then said Ziba unto the king, According to all that my lord the king hath commanded his servant, so shall thy servant do. As for Mephibosheth, said the king, he shall eat at my table, as one of the king's sons.
12ಆದರೆ ಮೆಫೀಬೋಶೆತನಿಗೆ ವಿಾಕನೆಂಬ ಹೆಸರುಳ್ಳ ಒಬ್ಬ ಚಿಕ್ಕ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾ ಗಿದ್ದ ಎಲ್ಲರೂ ಮೆಫೀಬೋಶೆತನಿಗೆ ದಾಸರಾಗಿದ್ದರು.And Mephibosheth had a young son, whose name was Micha. And all that dwelt in the house of Ziba were servants unto Mephibosheth.
13ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು.So Mephibosheth dwelt in Jerusalem: for he did eat continually at the king's table; and was lame on both his feet.