2 Samuel 5 - ASV (Kannada)
1 Then came all the tribes of Israel to David unto Hebron, and spake, saying, Behold, we are thy bone and thy flesh.ಇದಾದ ಮೇಲೆ ಇಸ್ರಾಯೇಲ್ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
2 In times past, when Saul was king over us, it was thou that leddest out and broughtest in Israel: and Jehovah said to thee, Thou shalt be shepherd of my people Israel, and thou shalt be prince over Israel.ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವನಾಗಿಯೂ ಆಗಿದ್ದಿ. ಆದದರಿಂದ ಕರ್ತನು ನಿನಗೆ--ನೀನು ನನ್ನ ಜನರಾದ ಇಸ್ರಾಯೇ ಲನ್ನು ಮೇಯಿಸುವಿ; ಇಸ್ರಾಯೇಲಿನ ಮೇಲೆ ನಾಯಕನಾಗಿರುವಿ ಎಂದು ಹೇಳಿದನು ಅಂದರು.
3 So all the elders of Israel came to the king to Hebron; and king David made a covenant with them in Hebron before Jehovah: and they anointed David king over Israel.ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು.
4 David was thirty years old when he began to reign, and he reigned forty years.ದಾವೀದನು ಆಳಲು ಪ್ರಾರಂಭಿಸಿದಾಗ ಮೂವತ್ತು ವರುಷದವ ನಾಗಿದ್ದನು; ಅವನು ನಾಲ್ವತ್ತು ವರುಷ ಆಳಿದನು.
5 In Hebron he reigned over Judah seven years and six months; and in Jerusalem he reigned thirty and three years over all Israel and Judah.ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು.
6 And the king and his men went to Jerusalem against the Jebusites, the inhabitants of the land, who spake unto David, saying, Except thou take away the blind and the lame, thou shalt not come in hither; thinking, David cannot come in hither.ಆಗ ಅರಸನೂ ಅವನ ಜನರೂ ದೇಶದ ನಿವಾಸಿ ಗಳಾದ ಯೆಬೂಸಿಯರು ಒಳಗೆ ಯೆರೂಸಲೇಮಿಗೆ ಬಂದರು. ದಾವೀದನು ಇದರಲ್ಲಿ ಬರಲಾರನೆಂದು ಅವರು ನೆನಸಿ ದಾವೀದನಿಗೆ--ನೀನು ಕುರುಡರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು ನೀನು ಇಲ್ಲಿಗೆ ಬರಲಾರಿ ಅಂದರು.
7 Nevertheless David took the stronghold of Zion; the same is the city of David.ಆದಾಗ್ಯೂ ದಾವೀದನು ಚೀಯೋನಿನ ಕೋಟೆಯನ್ನು ಹಿಡುಕೊಂಡನು. ಅದೇ ದಾವೀದನ ಪಟ್ಟಣವು.
8 And David said on that day, Whosoever smiteth the Jebusites, let him get up to the watercourse, and `smite' the lame and the blind, that are hated of David's soul. Wherefore they say, There are the blind and the lame; he cannot come into the house.ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು.
9 And David dwelt in the stronghold, and called it the city of David. And David built round about from Millo and inward.ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
10 And David waxed greater and greater; for Jehovah, the God of hosts, was with him.ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
11 And Hiram king of Tyre sent messengers to David, and cedar-trees, and carpenters, and masons; and they built David a house.ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
12 And David perceived that Jehovah had established him king over Israel, and that he had exalted his kingdom for his people Israel's sake.ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು.
13 And David took him more concubines and wives out of Jerusalem, after he was come from Hebron; and there were yet sons and daughters born to David.ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ ಯೆರೂಸಲೇಮಿನಿಂದ ಇನ್ನೂ ಕೆಲವು ಮಂದಿ ಉಪಪತ್ನಿಯರನ್ನೂ ಹೆಂಡತಿಯರನ್ನೂ ಮಾಡಿಕೊಂಡನು; ದಾವೀದನಿಗೆ ಇನ್ನೂ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
14 And these are the names of those that were born unto him in Jerusalem: Shammua, and Shobab, and Nathan, and Solomon,ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್
15 and Ibhar, and Elishua, and Nepheg, and Japhia,ಸೊಲೊಮೋನ್ ಇಬ್ಹಾರ್
16 and Elishama, and Eliada, and Eliphelet.ಎಲೀಷೂವ ನೆಫೆಗ್ ಯಾಫೀಯ ಎಲೀಷಾಮ ಎಲ್ಯಾದ ಎಲೀಫೆ ಲೆಟ್ ಇವರೇ.
17 And when the Philistines heard that they had anointed David king over Israel, all the Philistines went up to seek David; and David heard of it, and went down to the stronghold.ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಲು ಅಭಿಷೇಕಮಾಡಿದ್ದಾರೆಂದು ಫಿಲಿಷ್ಟಿ ಯರು ಕೇಳಿದಾಗ ಅವರೆಲ್ಲರು ದಾವೀದನನ್ನು ಹುಡುಕು ವದಕ್ಕೆ ಬಂದರು. ಅದನ್ನು ದಾವೀದನು ಕೇಳಿ ಗಡಿ ಸ್ಥಳಕ್ಕೆ ಹೋದನು.
18 Now the Philistines had come and spread themselves in the valley of Rephaim.ಆದರೆ ಫಿಲಿಷ್ಟಿಯರು ಬಂದು ರೆಫಾಯಾಮ್ ತಗ್ಗಿನಲ್ಲಿ ಇಳುಕೊಂಡರು.
19 And David inquired of Jehovah, saying, Shall I go up against the Philistines? wilt thou deliver them into my hand? And Jehovah said unto David, Go up; for I will certainly deliver the Philistines into thy hand.ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು.
20 And David came to Baal-perazim, and David smote them there; and he said, Jehovah hath broken mine enemies before me, like the breach of waters. Therefore he called the name of that place Baal-perazim.ಆದಕಾರಣ ದಾವೀದನು ಬಾಳ್‌ಪೆರಾಚೀಮಿಗೆ ಬಂದು ಅಲ್ಲಿ ಅವರನ್ನು ಹೊಡೆದು--ನೀರು ಕಟ್ಟೆ ಒಡೆದು ಹರಿಯುವ ಹಾಗೆ ಕರ್ತನು ನನ್ನ ಮುಂದೆ ನನ್ನ ಶತ್ರುಗಳ ಮೇಲೆ ಹರಿದು ಬಿದ್ದಿದ್ದಾನೆ ಎಂದು ಹೇಳಿ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಿ ಟ್ಟನು.
21 And they left their images there; and David and his men took them away.ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.
22 And the Philistines came up yet again, and spread themselves in the valley of Rephaim.ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು.
23 And when David inquired of Jehovah, he said, Thou shalt not go up: make a circuit behind them, and come upon them over against the mulberry-trees.ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು.
24 And it shall be, when thou hearest the sound of marching in the tops of the mulberry-trees, that then thou shalt bestir thyself; for then is Jehovah gone out before thee to smite the host of the Philistines.ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.
25 And David did so, as Jehovah commanded him, and smote the Philistines from Geba until thou come to Gezer.ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
Kannada Bible