Bible

2 Peter 1 - DBY (Kannada)

1 Simon Peter, bondman and apostle of Jesus Christ, to them that have received like precious faith with us through [the] righteousness of our God and Saviour Jesus Christ:ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ--

2 Grace and peace be multiplied to you in [the] knowledge of God and of Jesus our Lord.ದೇವರ ವಿಷಯವಾಗಿಯೂ ನಮ್ಮ ಕರ್ತನಾದ ಯೇಸುವಿನ ವಿಷಯವಾಗಿಯೂ ಪರಿಜ್ಞಾನವು ನಿಮಗೆ ಉಂಟಾಗುವದರಲ್ಲಿ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.

3 As his divine power has given to us all things which relate to life and godliness, through the knowledge of him that has called us by glory and virtue,ತನ್ನ ಮಹಿಮೆಗಾಗಿಯೂ ಗುಣಾತಿಶಯಕ್ಕಾಗಿಯೂ ನಮ್ಮನ್ನು ಕರೆದಾತನ ವಿಷಯವಾದ ಪರಿಜ್ಞಾನದ ಮೂಲಕವಾಗಿ ಆತನ ದೈವಶಕ್ತಿಯು ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ನಮಗೆ ದಯಪಾಲಿಸಿತು.

4 through which he has given to us the greatest and precious promises, that through these ye may become partakers of [the] divine nature, having escaped the corruption that is in the world through lust.ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಆತನು ಅತ್ಯಂತ ಮಹತ್ವ ವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯ ಪಾಲಿಸಿದ್ದಾನೆ.

5 But for this very reason also, using therewith all diligence, in your faith have also virtue, in virtue knowledge,ಈಕಾರಣದಿಂದಲೇ ನೀವು ಪೂರ್ಣ ಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ

6 in knowledge temperance, in temperance endurance, in endurance godliness,ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ

7 in godliness brotherly love, in brotherly love love:ಭಕ್ತಿಗೆ ಸಹೋದರ ಕರುಣೆಯನ್ನೂ ಸಹೋದರ ಕರುಣೆಗೆ ಪ್ರೀತಿಯನ್ನೂ ಕೂಡಿಸಿರಿ.

8 for these things existing and abounding in you make [you] to be neither idle nor unfruitful as regards the knowledge of our Lord Jesus Christ;ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪರಿಜ್ಞಾನದಲ್ಲಿ ನಿಮ್ಮನ್ನು ಬಂಜೆಯರೂ ನಿಷ್ಪಲರೂ ಆಗದಂತೆ ಮಾಡುತ್ತವೆ.

9 for he with whom these things are not present is blind, short-sighted, and has forgotten the purging of his former sins.ಇವುಗಳಿಲ್ಲದವನು ಕುರುಡನಾಗಿದ್ದಾನೆ; ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳಿಂದ ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.

10 Wherefore the rather, brethren, use diligence to make your calling and election sure, for doing these things ye will never fall;ಆದದರಿಂದ ಸಹೋದರರೇ, ನಿಮ್ಮ ಕರೆಯುವಿಕೆ ಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳುವದಕ್ಕೆ ಜಾಗ್ರತೆಯಾಗಿರಿ. ಯಾಕಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ತಪ್ಪಿಹೋಗುವದಿಲ್ಲ

11 for thus shall the entrance into the everlasting kingdom of our Lord and Saviour Jesus Christ be richly furnished unto you.ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಹಾಗೆ ನಿಮಗೆ ಧಾರಾಳವಾಗಿ ಅನುಗ್ರಹಿಸಲ್ಪಡುವದು.

12 Wherefore I will be careful to put you always in mind of these things, although knowing [them] and established in the present truth.ಆದದರಿಂದ ನೀವು ಈ ಸಂಗತಿಗಳನ್ನು ತಿಳಿದ ವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮಗೆ ಜ್ಞಾಪಕಕೊಡುವದಕ್ಕೆ ನಾನು ಎಂದಿಗೂ ಅಲಕ್ಷ್ಯಮಾಡುವದಿಲ್ಲ.

13 But I account it right, as long as I am in this tabernacle, to stir you up by putting [you] in remembrance,ಹೌದು, ನಾನು ನನ್ನ (ದೇಹವೆಂಬ) ಗುಡಾರದಲ್ಲಿರುವ ತನಕ ನಿಮ್ಮನ್ನು ಜ್ಞಾಪಕಪಡಿಸಿ ಪ್ರೇರಿಸುವದು ಯುಕ್ತವೆಂದೆಣಿಸಿದ್ದೇನೆ.

14 knowing that the putting off of my tabernacle is speedily [to take place], as also our Lord Jesus Christ has manifested to me;ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತೋರಿಸಿದ ಪ್ರಕಾರ ನಾನು ಈ ಗುಡಾರವನ್ನು ತೆಗೆದುಹಾಕುವದು ಬೇಗನೆ ಬರುತ್ತದೆಂದು ಬಲ್ಲೆನು.

15 but I will use diligence, that after my departure ye should have also, at any time, [in your power] to call to mind these things.ಹೇಗಿದ್ದರೂ ನೀವು ನನ್ನ ಮರಣಾನಂತರದಲ್ಲಿ ಇವುಗಳನ್ನು ಯಾವಾಗಲೂ ಜ್ಞಾಪಕಮಾಡಿಕೊಳ್ಳುವದು ಸಾಧ್ಯವಾಗುವಂತೆ ಪ್ರಯಾಸಪಡುವೆನು.

16 For we have not made known to you the power and coming of our Lord Jesus Christ, following cleverly imagined fables, but having been eyewitnesses of *his* majesty.ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಆತನ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿ ಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವ ರಾಗಿಯೇ ತಿಳಿಯಪಡಿಸಿದೆವು.

17 For he received from God [the] Father honour and glory, such a voice being uttered to him by the excellent glory: This is my beloved Son, in whom *I* have found my delight;ಈತನು ಪ್ರಿಯನಾಗಿ ರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂಬ ಧ್ವನಿಯು ಘನವಾದ ಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ ಮಹಿಮೆಯನ್ನು ಹೊಂದಿದನಲ್ಲವೇ.

18 and this voice *we* heard uttered from heaven, being with him on the holy mountain.ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.

19 And we have the prophetic word [made] surer, to which ye do well taking heed (as to a lamp shining in an obscure place) until [the] day dawn and [the] morning star arise in your hearts;ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು.

20 knowing this first, that [the scope of] no prophecy of scripture is had from its own particular interpretation,ಬರಹದ ಯಾವ ಪ್ರವಾದನೆಯೂ ಕೇವಲ ಸ್ವಂತ ವಾಗಿ ವಿವರಿಸತಕ್ಕಂಥದ್ದಲ್ಲವೆಂಬದನ್ನು ಮೊದಲು ತಿಳಿದುಕೊಳ್ಳಿರಿ.

21 for prophecy was not ever uttered by [the] will of man, but holy men of God spake under the power of [the] Holy Spirit.ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.

Kannada Bible