Bible

2 Corinthians 7 - WEB (Kannada)

1 Having therefore these promises, beloved, let us cleanse ourselves from all defilement of flesh and spirit, perfecting holiness in the fear of God.ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.

2 Open your hearts to us. We wronged no one. We corrupted no one. We took advantage of no one.ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.

3 I say this not to condemn you, for I have said before, that you are in our hearts to die together and live together.ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ; ಯಾಕಂದರೆ ನಿಮ್ಮೊಂದಿಗೆ ಸಾಯುವದಕ್ಕೂ ಬದುಕು ವದಕ್ಕೂ ನೀವು ನಮ್ಮ ಹೃದಯಗಳಲ್ಲಿದ್ದೀರೆಂದು ಮೊದಲೇ ಹೇಳಿದ್ದೇನೆ.

4 Great is my boldness of speech toward you. Great is my boasting on your behalf. I am filled with comfort. I overflow with joy in all our affliction.ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.

5 For even when we had come into Macedonia, our flesh had no relief, but we were afflicted on every side. Fightings were outside. Fear was inside.ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು.

6 Nevertheless, he who comforts the lowly, God, comforted us by the coming of Titus;ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.

7 and not by his coming only, but also by the comfort with which he was comforted in you, while he told us of your longing, your mourning, and your zeal for me; so that I rejoiced still more.ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.

8 For though I made you sorry with my letter, I do not regret it, though I did regret it. For I see that my letter made you sorry, though just for a while.ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.

9 I now rejoice, not that you were made sorry, but that you were made sorry to repentance. For you were made sorry in a godly way, that you might suffer loss by us in nothing.ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

10 For godly sorrow works repentance to salvation, which brings no regret. But the sorrow of the world works death.ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

11 For behold, this same thing, that you were made sorry in a godly way, what earnest care it worked in you. Yes, what defense, indignation, fear, longing, zeal, and vengeance! In everything you demonstrated yourselves to be pure in the matter.ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ

12 So although I wrote to you, I wrote not for his cause that did the wrong, nor for his cause that suffered the wrong, but that your earnest care for us might be revealed in you in the sight of God.ನಾನು ಹೀಗೆ ನಿಮಗೆ ಬರೆದದ್ದು ಅನ್ಯಾಯ ಮಾಡಿದವನಿ ಗೋಸ್ಕರವಲ್ಲ, ಅನ್ಯಾಯ ಸಹಿಸಿದವನಿಗೋಸ್ಕರವೂ ಅಲ್ಲ; ದೇವರ ದೃಷ್ಟಿಯಲ್ಲಿ ನಿಮಗೋಸ್ಕರ ನಮಗಿರುವ ಚಿಂತೆಯು ನಿಮಗೆ ತೋರಿ ಬರುವದಕ್ಕೋಸ್ಕರವೇ ಬರೆದೆನು.

13 Therefore we have been comforted. In our comfort we rejoiced the more exceedingly for the joy of Titus, because his spirit has been refreshed by you all.ಆದಕಾರಣ ನಿಮ್ಮ ಸಂತೈಸುವಿಕೆಯಿಂದ ನಮಗೆ ಆದರಣೆ ಉಂಟಾಯಿತು. ಹೌದು, ನಿಮ್ಮೆಲ್ಲರಿಂದ ತೀತನ ಮನಸ್ಸಿಗೆ ಉಪಶಮನವಾದ ಕಾರಣ ನಾವು ಅವನ ಸಂತೋಷಕ್ಕಾಗಿ ಹೆಚ್ಚಾಗಿ ಸಂತೋಷಪಟ್ಟೆವು.

14 For if in anything I have boasted to him on your behalf, I was not disappointed. But as we spoke all things to you in truth, so our glorying also which I made before Titus was found to be truth.ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದವುಗಳೆಲ್ಲಾ ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯೂ ಸತ್ಯವೆಂದು ಕಂಡುಬಂತು.

15 His affection is more abundantly toward you, while he remembers all of your obedience, how with fear and trembling you received him.ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.

16 I rejoice that in everything I am of good courage concerning you.ಸರ್ವವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷಪಡುತ್ತೇನೆ.

Kannada Bible