2 Corinthians 2 - WEB (Kannada)
1 But I determined this for myself, that I would not come to you again in sorrow.ಆದರೆ ನಾನು ತಿರಿಗಿ ನಿಮ್ಮ ಬಳಿಗೆ ದುಃಖದಿಂದ ಬರುವದಿಲ್ಲವೆಂದು ನನ್ನಲ್ಲಿ ತೀರ್ಮಾನಿಸಿಕೊಂಡೆನು.
2 For if I make you sorry, then who will make me glad but he who is made sorry by me?ನಾನು ನಿಮ್ಮನ್ನು ದುಃಖ ಪಡಿಸಿದರೆ ನನ್ನನ್ನು ಆನಂದಪಡಿಸುವದಕ್ಕೆ ಯಾರಿ ದ್ದಾರೆ? ನನ್ನಿಂದ ದುಃಖ ಹೊಂದಿದವನೇ ಹೊರತು ಬೇರೆ ಯಾರೂ ಇಲ್ಲವಲ್ಲಾ.
3 And I wrote this very thing to you, so that, when I came, I wouldn't have sorrow from them of whom I ought to rejoice; having confidence in you all, that my joy would be shared by all of you.ನಾನು ಬಂದಾಗ ನನ್ನನು ಸಂತೋಷಪಡಿಸತಕ್ಕವರಿಂದ ದುಃಖ ಹೊಂದಬಾರ ದೆಂದೂ ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದೂ ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸ ವಿರುವದರಿಂದ ನಾನು ನಿಮಗೆ ಇದನ್ನು ಬರೆದಿದ್ದೇನೆ.
4 For out of much affliction and anguish of heart I wrote to you with many tears, not that you should be made sorry, but that you might know the love that I have so abundantly for you.ನಿಮಗೆ ದುಃಖವಾಗಬೇಕಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದು ಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರಿನಿಂದಲೂ ಹೃದಯದ ಬಹುಸಂಕಟದಿಂದಲೂ ವ್ಯಾಕುಲ ದಿಂದಲೂ ನಿಮಗೆ ಬರೆದೆನು.
5 But if any has caused sorrow, he has caused sorrow, not to me, but in part (that I not press too heavily) to you all.ಆದರೆ ನಾನು ನಿಮ್ಮ ಮೇಲೆ ವಿಶೇಷವಾದ ಭಾರವನ್ನು ಹಾಕದಂತೆ ಯಾವನಾದರೂ ದುಃಖ ವನ್ನುಂಟು ಮಾಡಿದ್ದರೆ ಅವನು ಸ್ವಲ್ಪ ಮಟ್ಟಿಗೆ ನನ್ನನ್ನು ದುಃಖಪಡಿಸಿದ್ದಾನೆ.
6 Sufficient to such a one is this punishment which was inflicted by the many;ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದವರಿಂದ ಉಂಟಾದ ಆ ಶಿಕ್ಷೆಯೇ ಸಾಕು.
7 so that on the contrary you should rather forgive him and comfort him, lest by any means such a one should be swallowed up with his excessive sorrow.ಇನ್ನು ಮೇಲೆ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.
8 Therefore I beg you to confirm your love toward him.ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸ ಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
9 For to this end I also wrote, that I might know the proof of you, whether you are obedient in all things.ಸರ್ವವಿಷಯದಲ್ಲೂ ನೀವು ವಿಧೇಯರಾಗಿದ್ದೀರೋ ಏನೋ ನಿಮ್ಮನ್ನು ಪರೀಕ್ಷಿಸಿ ತಿಳುಕೊಳ್ಳಬೇಕೆಂಬ ಉದ್ದೇಶದಿಂದಲೇ ಬರೆದೆನು.
10 Now I also forgive whomever you forgive anything. For if indeed I have forgiven anything, I have forgiven that one for your sakes in the presence of Christ,ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ; ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿಮಿತ್ತವೇ ಮನ್ನಿಸಿದೆನು.
11 that no advantage may be gained over us by Satan; for we are not ignorant of his schemes.ಸೈತಾನನಿಗೆ ನಮ್ಮ ವಿಷಯದಲ್ಲಿ ಎಡೆ ಸಿಕ್ಕಬಾರದು; ಅವನ ಕುತಂತ್ರಗಳನ್ನು ನಾವು ಅರಿಯದವರಲ್ಲವಲ್ಲಾ.
12 Now when I came to Troas for the Gospel of Christ, and when a door was opened to me in the Lord,ಇದಲ್ಲದೆ ಕ್ರಿಸ್ತನ ಸುವಾರ್ತೆಯನ್ನು ಸಾರುವ ದಕ್ಕಾಗಿ ನಾನು ತ್ರೋವಕ್ಕೆ ಬಂದಾಗ ಕರ್ತನಿಂದ ನನಗೆ ಬಾಗಲು ತೆರೆಯಲ್ಪಟ್ಟಿತು.
13 I had no relief for my spirit, because I didn't find Titus, my brother, but taking my leave of them, I went out into Macedonia.ಆದರೂ ನನ್ನ ಸಹೋದರನಾದ ತೀತನು ನನಗೆ ಸಿಕ್ಕಲಿಲ್ಲವಾದ ಕಾರಣ ನನ್ನ ಆತ್ಮಕ್ಕೆ ಉಪಶಮನವಿಲ್ಲದೆ ಅಲ್ಲಿದ್ದವರಿಂದ ಕಳುಹಿಸಿ ಕೊಂಡವನಾಗಿ ಹೊರಟು ಮಕೆದೋನ್ಯಕ್ಕೆ ಬಂದೆನು.
14 Now thanks be to God, who always leads us in triumph in Christ, and reveals through us the sweet aroma of his knowledge in every place.ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವ ದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ;
15 For we are a sweet aroma of Christ to God, in those who are saved, and in those who perish;ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ.
16 to the one a stench from death to death; to the other a sweet aroma from life to life. Who is sufficient for these things?ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?
17 For we are not as so many, peddling the word of God. But as of sincerity, but as of God, in the sight of God, we speak in Christ.ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
Kannada Bible