1 Samuel 8 - BBE (Kannada)
1 Now when Samuel was old, he made his sons judges over Israel.ಸಮುವೇಲನು ವೃದ್ಧನಾದಾಗ ಆಗಿದ್ದೇನಂದರೆ ತನ್ನ ಕುಮಾರರನ್ನು ಇಸ್ರಾ ಯೇಲಿಗೆ ನ್ಯಾಯಾಧಿಪತಿಗಳಾಗಿರುವದಕ್ಕೆ ಇಟ್ಟನು.
2 The name of his first son was Joel and the name of his second Abijah: they were judges in Beer-sheba.ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
3 And his sons did not go in his ways, but moved by the love of money took rewards, and were not upright in judging.ಆದರೆ ಅವನ ಮಕ್ಕಳು ಅವನ ಮಾರ್ಗದಲ್ಲಿ ನಡೆಯದೆ ಲೋಭಕ್ಕಾಗಿ ಮಾರ್ಗತಪ್ಪಿ ಲಂಚವನ್ನು ತಕ್ಕೊಂಡು ನ್ಯಾಯವನ್ನು ತಪ್ಪಿಸಿದರು.
4 Then all the responsible men of Israel got together and went to Samuel at Ramah,ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು
5 And said to him, See now, you are old, and your sons do not go in your ways: give us a king now to be our judge, so that we may be like the other nations.ಅವನಿಗೆ-- ಇಗೋ, ನೀನು ವೃದ್ಧನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ. ಈಗ ನ್ಯಾಯತೀರಿಸು ವದಕ್ಕೆ ಸಮಸ್ತ ಜನಾಂಗಗಳ ಹಾಗೆ ನಮಗೆ ಒಬ್ಬ ಅರಸನನ್ನು ನೇಮಿಸು ಅಂದರು.
6 But Samuel was not pleased when they said to him, Give us a king to be our judge. And Samuel made prayer to the Lord.ಆದರೆ--ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು ಎಂದು ಅವರು ಹೇಳಿದ ವಾರ್ತೆಯು ಸಮುವೇಲನಿಗೆ ಮನ ನೋಯಿಸುವಂತದ್ದಾಗಿತ್ತು. ಅವನು ಕರ್ತನಿಗೆ ಪ್ರಾರ್ಥನೆ ಮಾಡಿದನು.
7 And the Lord said to Samuel, Give ear to the voice of the people and what they say to you: they have not been turned away from you, but they have been turned away from me, not desiring me to be king over them.ಆಗ ಕರ್ತನು ಸಮು ವೇಲನಿಗೆ--ಜನರು ನಿನಗೆ ಹೇಳಿದ್ದೆಲ್ಲಾದರಲ್ಲಿ ಅವರ ಮಾತು ಕೇಳು. ಯಾಕಂದರೆ ಅವರು ನಿನ್ನನ್ನು ತೊರೆ ದಿಲ್ಲ; ನಾನು ಅವರನ್ನು ಆಳದ ಹಾಗೆ ನನ್ನನ್ನು ತೊರೆದಿದ್ದಾರೆ.
8 As they have done from the first, from the day when I took them out of Egypt till this day, turning away from me and worshipping other gods, so now they are acting in the same way to you.ನಾನು ಅವರನ್ನು ಐಗುಪ್ತದಿಂದ ಬರ ಮಾಡಿದ ದಿನ ಮೊದಲುಗೊಂಡು ಈ ದಿನದ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿ ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡು ತ್ತಾರೆ.
9 Give ear now to their voice: but make a serious protest to them, and give them a picture of the sort of king who will be their ruler.ಈಗ ಅವರ ಮಾತನ್ನು ಕೇಳು; ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬದನ್ನು ತಿಳಿಸು ಅಂದನು.
10 And Samuel said all these words of the Lord to the people who were desiring a king.ಆಗ ಸಮುವೇಲನು ಅರಸನನ್ನು ಕೇಳಿದ ಜನ ರಿಗೆ ಕರ್ತನ ವಾಕ್ಯಗಳನ್ನೆಲ್ಲಾ ಹೇಳಿದನು.
11 And he said, This is the sort of king who will be your ruler: he will take your sons and make them his servants, his horsemen, and drivers of his war-carriages, and they will go running before his war-carriages;ನಿಮ್ಮನ್ನು ಆಳುವ ಅರಸನ ಅಧಿಕಾರ ಏನಂದರೆ--ಅವನು ನಿಮ್ಮ ಕುಮಾರರನ್ನು ತನಗೋಸ್ಕರ ತನ್ನ ರಥ ಸವಾರರಾ ಗಿಯೂ ರಾಹುತರಾಗಿಯೂ ತಕ್ಕೊಳ್ಳುವನು.
12 And he will make them captains of thousands and of fifties; some he will put to work ploughing and cutting his grain and making his instruments of war and building his war-carriages.ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.
13 Your daughters he will take to be makers of perfumes and cooks and bread-makers.ಇದಲ್ಲದೆ ಅವನು ನಿಮ್ಮ ಕುಮಾರ್ತೆಯರನ್ನು ತೈಲ ಗಾರ್ತಿಗಳಾಗಿಯೂ ಅಡಿಗೆ ಮಾಡುವವರಾಗಿಯೂ ರೊಟ್ಟಿಸುಡುವವರಾಗಿಯೂ ಇಟ್ಟುಕೊಳ್ಳುವನು.
14 He will take your fields and your vine-gardens and your olive-gardens, all the best of them, and give them to his servants.ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೇ ತೋಪುಗಳನ್ನೂ ತೆಗೆದು ಕೊಂಡು ತನ್ನ ಸೇವಕರಿಗೆ ಕೊಡುವನು.
15 He will take a tenth of your seed and of the fruit of your vines and give it to his servants.ನಿಮ್ಮ ಧಾನ್ಯಗಳಲ್ಲಿಯೂ ದ್ರಾಕ್ಷೇ ಫಲಗಳಲ್ಲಿಯೂ ಹತ್ತರಲ್ಲಿ ಒಂದನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುವನು.
16 He will take your men-servants and your servant-girls, and the best of your oxen and your asses and put them to his work.ನಿಮ್ಮ ದಾಸದಾಸಿಯ ರನ್ನೂ ಉತ್ತಮ ಯೌವನಸ್ಥರನ್ನೂ ನಿಮ್ಮ ಕತ್ತೆಗಳನ್ನೂ ತಕ್ಕೊಂಡು ತನ್ನ ಕೆಲಸಕ್ಕೆ ಇಡುವನು.
17 He will take a tenth of your sheep: and you will be his servants.ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆದು ಕೊಳ್ಳುವನು; ನೀವು ಅವನಿಗೆ ದಾಸರಾಗುವಿರಿ.
18 Then you will be crying out because of your king whom you have taken for yourselves; but the Lord will not give you an answer in that day.ನೀವು ನಿಮಗೆ ಆದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ; ಆದರೆ ಆ ದಿವಸದಲ್ಲಿ ಕರ್ತನು ನಿಮಗೆ ಕಿವಿಗೊಡುವದಿಲ್ಲ.
19 But the people gave no attention to the voice of Samuel; and they said, No, but we will have a king over us,ಆದರೂ ಜನರು ಸಮುವೇಲನ ಮಾತನ್ನು ಕೇಳಲ್ಲೊಲ್ಲದೆ ಅವರು--ಹಾಗಲ್ಲ; ನಮ್ಮ ಮೇಲೆ ಅರಸನು ಇರಬೇಕು; ನಾವು ಸಕಲ ಜನಾಂಗಗಳ ಹಾಗೆ ಇರಬೇಕು;
20 So that we may be like the other nations, and so that our king may be our judge and go out before us to war.ನಮ್ಮ ಅರಸನು ನಮಗೆ ನ್ಯಾಯತೀರಿಸುವನು; ಅವನು ನಮ್ಮ ಮುಂದೆ ಹೊರಟು ನಮ್ಮ ಯುದ್ಧಗಳನ್ನು ನಡಿಸುವನು ಅಂದರು.
21 Then Samuel, after hearing all the people had to say, went and gave an account of it to the Lord.ಸಮುವೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಕರ್ತನಿಗೆ ಹೇಳಿದನು.
22 And the Lord said to Samuel, Give ear to their voice and make a king for them. Then Samuel said to the men of Israel, Let every man go back to his town.ಆದರೆ ಕರ್ತನು ಸಮುವೇಲನಿಗೆ--ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು ಅಂದನು. ಆಗ ಸಮುವೇಲನು ಇಸ್ರಾಯೇಲ್ ಜನರಿಗೆ--ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ ಅಂದನು.
Kannada Bible