Bible

1 Peter 2 - KJV (Kannada)

1 Wherefore laying aside all malice, and all guile, and hypocrisies, and envies, all evil speakings,ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ.

2 As newborn babes, desire the sincere milk of the word, that ye may grow thereby:ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ.

3 If so be ye have tasted that the Lord is gracious.ಕರ್ತನು ಕೃಪಾಳುವೆಂದು ನೀವು ರುಚಿ ನೋಡಿದ್ದೀರಲ್ಲಾ.

4 To whom coming, as unto a living stone, disallowed indeed of men, but chosen of God, and precious,ನೀವು ಜೀವವುಳ್ಳ ಕಲ್ಲಾಗಿರು ವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿಜವಾಗಿಯೂ ನಿರಾಕರಿಸಲ್ಪಟ್ಟಿದ್ದರೂ ಅದು ದೇವ ರಿಂದ ಆಯಲ್ಪಟ್ಟದ್ದೂ ಅಮೂಲ್ಯವಾದದ್ದೂ ಆಯಿತು.

5 Ye also, as lively stones, are built up a spiritual house, an holy priesthood, to offer up spiritual sacrifices, acceptable to God by Jesus Christ.ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಸಂಬಂಧ ವಾದ ಮಂದಿರವಾಗುವದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕ ವಾದ ಆತ್ಮೀಯ ಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.

6 Wherefore also it is contained in the scripture, Behold, I lay in Sion a chief corner stone, elect, precious: and he that believeth on him shall not be confounded.ಇದಲ್ಲದೆ--ಇಗೋ, ಚೀಯೋನಿನಲ್ಲಿ ಮೂಲೆ ಗಲ್ಲನ್ನು ಇಡುತ್ತೇನೆ; ಅದು ಆಯಲ್ಪಟ್ಟದ್ದು, ಅಮೂಲ್ಯ ವಾದದ್ದು; ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗ ಪಡುವದೇ ಇಲ್ಲ ಎಂದು ಬರಹದಲ್ಲಿ ಇರುತ್ತದೆ.

7 Unto you therefore which believe he is precious: but unto them which be disobedient, the stone which the builders disallowed, the same is made the head of the corner,ಆದದರಿಂದ ನಂಬುವವರಾದ ನಿಮಗೆ ಆತನು ಅಮೂಲ್ಯನಾಗಿದ್ದಾನೆ. ಅವಿಧೇಯರಿಗಾ ದರೋ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

8 And a stone of stumbling, and a rock of offence, even to them which stumble at the word, being disobedient: whereunto also they were appointed.ಅದು ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿದೆ; ಅವರು ವಾಕ್ಯಕ್ಕೆ ಅವಿಧೇಯರಾದದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.

9 But ye are a chosen generation, a royal priesthood, an holy nation, a peculiar people; that ye should shew forth the praises of him who hath called you out of darkness into his marvellous light;ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.

10 Which in time past were not a people, but are now the people of God: which had not obtained mercy, but now have obtained mercy.ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆ ಯಾಗಿದ್ದೀರಿ; ಮೊದಲು ಕರುಣೆ ಹೊಂದಿರಲಿಲ್ಲ, ಈಗ ಕರುಣೆ ಹೊಂದಿದವರಾಗಿದ್ದೀರಿ.

11 Dearly beloved, I beseech you as strangers and pilgrims, abstain from fleshly lusts, which war against the soul;ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

12 Having your conversation honest among the Gentiles: that, whereas they speak against you as evildoers, they may by your good works, which they shall behold, glorify God in the day of visitation.ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ಸತ್ಕ್ರಿಯೆಗಳನ್ನು ಕಣ್ಣಾರೆಕಂಡು ದರ್ಶಿಸುವ ದಿನದಲ್ಲಿ ದೇವರನ್ನು ಕೊಂಡಾಡುವರು.

13 Submit yourselves to every ordinance of man for the Lord's sake: whether it be to the king, as supreme;ಮನುಷ್ಯನ ಪ್ರತಿಯೊಂದು ಕಟ್ಟಳೆಗೂ ಕರ್ತನ ನಿಮಿತ್ತ ನೀವು ಅಧೀನರಾಗಿರ್ರಿ. ಅರಸನು ಸರ್ವಾಧಿಕಾರಿ ಎಂತಲೂ

14 Or unto governors, as unto them that are sent by him for the punishment of evildoers, and for the praise of them that do well.ಅಧಿಪತಿಗಳು ಕೆಟ್ಟವರನ್ನು ದಂಡಿಸು ವದಕ್ಕೂ ಒಳ್ಳೆಯವರನ್ನು ಪ್ರೋತ್ಸಾಹಪಡಿಸುವದಕ್ಕೂ (ಅರಸನಿಂದ) ಅವರು ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರ್ರಿ.

15 For so is the will of God, that with well doing ye may put to silence the ignorance of foolish men:ನೀವು ಒಳ್ಳೇ ನಡತೆಯಿಂದ ತಿಳುವಳಿಕೆಯಿಲ್ಲದ ಮೂಢಜನರ ಬಾಯಿ ಮುಚ್ಚುವಂತೆ ಮಾಡುವದೇ ದೇವರ ಚಿತ್ತ.

16 As free, and not using your liberty for a cloke of maliciousness, but as the servants of God.ಸ್ವತಂತ್ರರಾಗಿರ್ರಿ; ಆದರೆ ಕೆಟ್ಟತನವನ್ನು ಮರೆಮಾಡು ವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಿ.

17 Honour all men. Love the brotherhood. Fear God. Honour the king.ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ.

18 Servants, be subject to your masters with all fear; not only to the good and gentle, but also to the froward.ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಭಯದಿಂದ ಅಧೀನ ರಾಗಿರ್ರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯ ರಾಗಿರ್ರಿ.

19 For this is thankworthy, if a man for conscience toward God endure grief, suffering wrongfully.ಒಬ್ಬನು ಅನ್ಯಾಯವಾಗಿ ಬಾಧೆಪಡುವವ ನಾಗಿದ್ದು ದೇವರ ವಿಷಯವಾದ ಮನಸ್ಸಾಕ್ಷಿಗೋಸ್ಕರ ಆ ದುಃಖವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.

20 For what glory is it, if, when ye be buffeted for your faults, ye shall take it patiently? but if, when ye do well, and suffer for it, ye take it patiently, this is acceptable with God.ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆ ಯಿಂದಿದ್ದರೆ ಅದರಿಂದೇನು ಹೆಚ್ಚಳ? ಆದರೆ ಒಳ್ಳೇ ದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿ ದ್ದರೆ ಇದು ದೇವರಿಗೆ ಅಂಗೀಕೃತವಾಗಿದೆ.

21 For even hereunto were ye called: because Christ also suffered for us, leaving us an example, that ye should follow his steps:ಇದ ಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು.

22 Who did no sin, neither was guile found in his mouth:ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.

23 Who, when he was reviled, reviled not again; when he suffered, he threatened not; but committed himself to him that judgeth righteously:ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.

24 Who his own self bare our sins in his own body on the tree, that we, being dead to sins, should live unto righteousness: by whose stripes ye were healed.ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.

25 For ye were as sheep going astray; but are now returned unto the Shepherd and Bishop of your souls.ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

Kannada Bible